ಪಿಕ್ ಅಪ್ ವಾಹನ ಪಲ್ಟಿ: ಸ್ಥಳದಲ್ಲೇ ಮೂವರು ಮೃತ್ಯು, 15 ಮಂದಿಗೆ ಗಾಯ

Update: 2020-06-15 10:18 GMT

ಹನೂರು : ನಿಯಂತ್ರಣ ತಪ್ಪಿದ ಬೊಲೆರೋ ವಾಹನ ಪಲ್ಟಿವಾಗಿ ಸ್ಥಳದಲ್ಲೇ ಮೂವರು ಮೃತಟ್ಟು, ಸುಮಾರು 15 ಮಂದಿಗೆ ಗಾಯವಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕೊರಮನಕತ್ತರಿ ಬಳಿ ಸೋಮವಾರ ನೆಡೆದಿದೆ.

ಚಿಕ್ಕಸಿದ್ದಮ್ಮ ( 55), ನಂಜುಂಡಯ್ಯ (60), ಸೀಮೆಎಣ್ಣೆ ನಾಗ (55) ಮೃತರು ಎಂದು ಗುರುತಿಸಲಾಗಿದೆ. ಇವರು ಹನೂರಿನ ಹುಣಸೇಪಾಳ್ಯ ಗ್ರಾಮದ ನಿವಾಸಿಗಳಾಗಿದ್ದಾರೆ. ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News