2,496 ಐಸೊಲೇಟೆಡ್ ಬೋಗಿಗಳನ್ನು ಶ್ರಮಿಕರ ಎಕ್ಸ್ ಪ್ರೆಸ್ ಆಗಿ ಪರಿವರ್ತಿಸಿದ ರೈಲ್ವೆ ಇಲಾಖೆ
ಹುಬ್ಬಳ್ಳಿ, ಜೂ.15: ರೈಲು ಬೋಗಿಗಳನ್ನು ಐಸೊಲೇಟೆಡ್ ವಾರ್ಡ್‍ಗಳಾಗಿ ಮಾರ್ಪಾಡು ಮಾಡಿ, ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರ್ಧರಿಸಲಾಗಿತ್ತು. ಆದರೆ, ಕೋಚ್‍ಗಳು ಮಾತ್ರ ಬಳಕೆಯಾಗುತ್ತಿರಲಿಲ್ಲ. ಹೀಗಾಗಿ, ಈ ಎಲ್ಲ ಬೋಗಿಗಳನ್ನು ಸದ್ಯ ಶ್ರಮಿಕರ ಸಂಚಾರಕ್ಕೆ ಬಳಕೆ ಮಾಡಲಾಗುತ್ತಿದೆ.
ಕೊರೋನ ಸೋಂಕಿತರನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಹುಬ್ಬಳ್ಳಿ ನೈರುತ್ಯ ರೈಲ್ವೆಯು 312 ಬೋಗಿಗಳನ್ನು ಐಸೊಲೇಷನ್(ಪ್ರತ್ಯೇಕಿಸಲಾದ ವಾರ್ಡ್) ಹಾಗೂ ತೀವ್ರ ನಿಗಾ ಘಟಕಗಳಾಗಿ(ಐಸಿಯು) ಪರಿವರ್ತಿಸಿತ್ತು. ಸೋಂಕಿತರು ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿ ಒಟ್ಟು 2,496 ಮಂದಿ ಐಸೊಲೇಷನ್ ಬೋಗಿಗಳಲ್ಲಿ ಇರಲು ವ್ಯವಸ್ಥೆ ಮಾಡಲಾಗಿತ್ತು. ಅವುಗಳು ಎರಡುವರೆ ತಿಂಗಳಿಂದ ಬಳಕೆಯಾಗದೆ ರೈಲ್ವೆ ವರ್ಕ್ ಶಾಪ್ ಮತ್ತು ರೈಲು ನಿಲ್ದಾಣದಲ್ಲೇ ನಿಂತಿದ್ದವು.
ಕೊರೋನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ರೈಲ್ವೆ ಐಸೊಲೇಟೆಡ್ ಕೋಚ್ ಮಾತ್ರ ಇದುವರೆಗೂ ಬಳಕೆಯಾಗಿಲ್ಲ. ಹೀಗಾಗಿ, ಈಗ ಅದೇ ಕೋರ್ಚ್‍ಗಳನ್ನು ಶ್ರಮಿಕರ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ.