×
Ad

ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕೆ ರಾಜ್ಯ ಸರಕಾರ ಅನುಮತಿ

Update: 2020-06-15 22:26 IST

ಬೆಂಗಳೂರು, ಜೂ.15: ಅರ್ಧದಲ್ಲಿಯೇ ನಿಂತ ಸಿನಿಮಾ ಚಿತ್ರೀಕರಣ, ಸೀರಿಯಲ್ ಶೂಟಿಂಗ್ ಹಾಗೂ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ರಾಜ್ಯ ಸರಕಾರ ಅನುಮತಿ ನೀಡಿದೆ.

ಲಾಕ್‍ಡೌನ್ 5ನೇ ಹಂತದಲ್ಲಿ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡಬಹುದು ಎಂದು ರಾಜ್ಯ ಸರಕಾರಗಳಿಗೆ ಸೂಚಿಸಿತ್ತು. ಅದರಂತೆ ರಾಜ್ಯದಲ್ಲೂ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ.

ಇನ್ನು, ಹೊಸ ಚಿತ್ರಗಳ ಶೂಟಿಂಗ್‍ಗೆ ಸರಕಾರ ಅನುಮತಿ ನೀಡದೇ ಇದ್ದರೂ, ಅರ್ಧದಲ್ಲಿಯೇ ನಿಲ್ಲಿಸಿರುವ ಸಿನಿಮಾಗಳ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಮಾಡುವುದಕ್ಕೆ ಸಮ್ಮತಿ ನೀಡಿದೆ. ಜೊತೆಗೆ ಸೀರಿಯಲ್ ಶೂಟಿಂಗ್ ಮುಂದುವರಿಕೆಗೆ ಅವಕಾಶ ಕಲ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News