ಫಕೀರಮ್ಮ ವೀರಪ್ಪ ಮಂತೂರ ನಿಧನ
Update: 2020-06-15 22:40 IST
ಗದಗ, ಜೂ.15: ರೋಣ ತಾಲೂಕಿನ ಬೆಳವಣಕಿ ಗ್ರಾಪಂನ ಹಿರಿಯ ಸದಸ್ಯ ಹಾಗೂ ಸಿಪಿಐಎಂ ಜಿಲ್ಲಾ ಸಮಿತಿಯ ಸದಸ್ಯ ಬಸವರಾಜ ಮಂತೂರ ಅವರ ತಾಯಿ ಫಕೀರಮ್ಮ ವೀರಪ್ಪ ಮಂತೂರ (87) ಗದಗ ಚಿಂತಾಮಣಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
ಮೃತರ ಅಂತ್ಯಕ್ರಿಯೆಯು ಮಂಗಳವಾರ (ಜೂ.16) ಬೆಳಗ್ಗೆ 10 ಗಂಟೆಗೆ ಸ್ವಗ್ರಾಮ ಬೆಳವಣಿಕಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.