×
Ad

ಪ್ರಗತಿ ಪರಿಶೀಲನಾ ಸಭೆ: ರಮೇಶ್ ಜಾರಕಿಹೊಳಿ- ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ಮಾತಿನ ಚಕಮಕಿ

Update: 2020-06-15 23:21 IST

ಬೆಳಗಾವಿ, ಜೂ.15: ಕೇಂದ್ರ ಸಚಿವ ಸುರೇಶ್ ಅಂಗಡಿ, ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಸರಕಾರದ ಕಾರ್ಯಕ್ರಮಗಳ ಕುರಿತಂತೆ ಮಾತಿನ ಚಕಮಕಿ ನಡೆಯಿತು.

ಬೆಳಗಾವಿ ಜಿಲ್ಲಾ ಪಂಚಾಯತ್ ನಲ್ಲಿ ಆಯೋಜಿಸಿದ್ದ ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಘಟನೆ ನಡೆದಿದೆ.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೇಂದ್ರ ಸರಕಾರ 20 ಲಕ್ಷ ಕೋಟಿ ಪ್ಯಾಕೇಜ್ ನೀಡಿದೆ. ಆ ಹಣ ಯಾರಿಗೆ ಎಷ್ಟು ಸಿಕ್ಕಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸುರೇಶ್ ಅಂಗಡಿ ಅವರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಬರೀ ಪ್ರಚಾರ ಪಡೆಯುವ ಕೆಲಸ ಮಾಡಿದ್ದಾರೆಯೇ ಹೊರತು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸದ್ಯ ನಾವೆಲ್ಲರೂ ಸೇರಿರುವುದು ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನೆಗಾಗಿ, ಇಲ್ಲಿ ರಾಜಕೀಯ ಮಾತನಾಡುವುದು ಸಮಂಜಸ ಅನಿಸುವುದಿಲ್ಲ ಎಂದು ಹೇಳಿದರು.

ಸಭೆ ಬಳಿಕ ಹೊರ ಬಂದು ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ ಅವರು, ನಮ್ಮ ಸರಕಾರದ ಬಗ್ಗೆ ಟೀಕೆ ಮಾಡಿದಾಗ ನಾವು ತಿರುಗೇಟು ನೀಡುತ್ತೇವೆ. ಅವರ ಸರಕಾರಗಳ ಬಗ್ಗೆ ಮಾತನಾಡಿದಾಗ ಅವರೂ ನಮಗೆ ತಿರುಗೇಟು ನೀಡುತ್ತಾರೆ. ಇಂತಹದೆಲ್ಲ ಮಾಮೂಲಿಯಾಗಿರುತ್ತವೆ. ಇದರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಬೇಕಾಗಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡುವಾಗ ಸಾಮಾನ್ಯ ಜ್ಞಾನವನ್ನಾದರೂ ಇಟ್ಟುಕೊಂಡು ಮಾತನಾಡುವ ಅವಶ್ಯಕತೆ ಇದೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News