×
Ad

ಜುಲೈ, ಅಗಸ್ಟ್ ನಲ್ಲಿ ರಾಜ್ಯದಲ್ಲಿ ಕೊರೋನ ಸೋಂಕು ಹೆಚ್ಚಳ: ಸಚಿವ ಶ್ರೀರಾಮಲು

Update: 2020-06-15 23:32 IST

ದಾವಣಗೆರೆ, ಜೂ.15: ಜುಲೈ ಹಾಗೂ ಅಗಸ್ಟ್ ನಲ್ಲಿ ರಾಜ್ಯದಲ್ಲಿ ಕೊರೋನ ಸೋಂಕು ಹೆಚ್ಚಾಗಲಿದೆ. ಅದ್ದರಿಂದ ಜನರು ಕೊರೋನಗೆ ಔಷಧಿ ಬರುವ ತನಕ ಜನ ಜಾಗೃತರಾಗಿರಬೇಕು ಎಂದು ಆರೋಗ್ಯ ಸಚಿವ ಶ್ರೀರಾಮಲು ಹೇಳಿದರು. 

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಲಕ್ಷ್ಮಿಪುರ ತಾಂಡಾದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಹೇರುವ ಬಗ್ಗೆ ಯಾವುದೇ ಸೂಚನೆ ಕೇಂದ್ರದಿಂದ ಬಂದಿಲ್ಲ ಎಂದ ಅವರು, ಮೂರು ತಿಂಗಳ ಕಾಲ ನಿರೀಕ್ಷಿತ ಪ್ರಮಾಣದಲ್ಲಿ ಸಂಪನ್ಮೂಲ ಕ್ರೋಡಿಕರಣ ಆಗಿಲ್ಲ. ಹಣಕಾಸಿನ ತೊಂದರೆಯಿಂದ ಕೆಲ ಇಲಾಖೆಗಳ ಕಾರ್ಯಕ್ರಮ ನಿಲ್ಲಿಸಲಾಗಿದೆ. ರಾಜ್ಯ ಸರಕಾರ ಆದಷ್ಟು ಕಾರ್ಯಕ್ರಮಗಳ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News