ಕೊರೋನ ರೋಗಿಗಳ ಸುಲಿಗೆಯಾಗದಂತೆ ಎಚ್ಚರ ವಹಿಸಿ: ಸಿದ್ದರಾಮಯ್ಯ
Update: 2020-06-16 21:14 IST
ಬೆಂಗಳೂರು, ಜೂ.16: ಕೊರೋನ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ರಾಜ್ಯ ಸರಕಾರದ ಕ್ರಮ ಸ್ವಾಗತಾರ್ಹ. ಆದರೆ, ಈ ಅವಕಾಶವನ್ನು ಖಾಸಗಿ ಆಸ್ಪತ್ರೆಗಳು ದುರ್ಬಳಕೆ ಮಾಡಿಕೊಂಡು ರೋಗಿಗಳ ಸುಲಿಗೆ ಮಾಡದ ರೀತಿಯಲ್ಲಿ ಮುಖ್ಯಮಂತ್ರಿ ನಿಗಾವಹಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಆರೋಗ್ಯ ಸೇವಾ ಸಂಘಗಳ ಒಕ್ಕೂಟ, ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿತರ ದಿನದ ಚಿಕಿತ್ಸೆಗೆ 15 ಸಾವಿರ ರೂ., ಆಮ್ಲಜನಕ ಪೂರೈಕೆಗೆ 20 ಸಾವಿರ ರೂ., ವೆಂಟಿಲೇಟರ್ ಸೇವೆಗೆ 35 ಸಾವಿರ ರೂ. ನಿಗದಿಪಡಿಸಿರುವ ಪ್ರಸ್ತಾವವನ್ನು ಮುಖ್ಯಮಂತ್ರಿ ಒಪ್ಪಿಕೊಂಡರೆ ಜನರನ್ನು ಸಾವಿನ ದವಡೆಗೆ ನೂಕಿದಂತೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.