ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಧಾರಾಕಾರ ಮಳೆ
Update: 2020-06-18 20:35 IST
ಮಡಿಕೇರಿ, ಜೂ.18 : ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
ಕಳೆದ 24 ಗಂಟೆಯಲ್ಲಿ 204 ಮಿ ಮೀ ಮಳೆಯಾಗಿದೆ. ಮಡಿಕೇರಿ 49, ನಾಪೋಕ್ಲು 54, ಸಂಪಾಜೆ 61, ವಿರಾಜಪೇಟೆ 51, ಹುದಿಕೇರಿ 51 ಮಿಲಿ ಮೀಟರ್, ಸೋಮವಾರಪೇಟೆಯ ಶಾಂತಳ್ಳಿ 42, ಅಮ್ಮತ್ತಿ 28.5, ಪೊನ್ನಂಪೇಟೆ 36 ಮಿಲಿ ಮೀಟರ್ ಮಳೆಯಾಗಿದೆ.