ಲಾಕ್‍ಡೌನ್ ಸಂಕಷ್ಟ: ವಕೀಲರಿಗೆ 5 ಕೋಟಿ ರೂ. ನೆರವು ಘೋಷಿಸಿದ ಸಿಎಂ ಯಡಿಯೂರಪ್ಪ
Update: 2020-06-19 20:30 IST
ಬೆಂಗಳೂರು, ಜೂ. 19: ಕೊರೋನ ಸೋಂಕು ತಡೆಗೆ ಹೇರಿದ್ದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ 5 ಕೋಟಿ ರೂ.ನೆರವು ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಶುಕ್ರವಾರ ಟ್ವೀಟ್ ಮಾಡಿರುವ ಅವರು, ಲಾಕ್‍ಡೌನ್ ಅವಧಿಯಲ್ಲಿ ನ್ಯಾಯಾಲಯಗಳು ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ನೆರವು ನೀಡಬೇಕು ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನಿಯೋಗದ ಮನವಿ ಹಿನ್ನೆಲೆಯಲ್ಲಿ ಮೇಲ್ಕಂಡ ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ವಕೀಲರ ಪರಿಷತ್ತಿನ ಕೋವಿಡ್-19 ಪರಿಹಾರ ನಿಧಿಗೆ ನೆರವು ನೀಡುವಂತೆ ಆದೇಶ ಮಾಡಿದ್ದು, ನಾಲ್ಕು ಚಕ್ರದ ವಾಹನವಿಲ್ಲದ ಮತ್ತು ಪರ್ಯಾಯ ಆದಾಯ ಮೂಲ ಇಲ್ಲದ ವಕೀಲರಿಗೆ ಸರಕಾರದ ನೆರವು ಅನುಕೂಲವಾಗಲಿದೆ. ಫಲಾನುಭವಿಗಳ ಖಾತೆಗೆ 5 ಸಾವಿರ ರೂ.ಪರಿಹಾರದ ಮೊತ್ತ ಜಮೆಯಾಗಲಿದೆ' ಎಂದು ಯಡಿಯೂರಪ್ಪ ಪ್ರಕಟಿಸಿದ್ದಾರೆ.