ಚುನಾವಣಾ ಆಯೋಗ ನಿದ್ರೆಯಿಂದ ಎದ್ದೇಳಲಿ: ಹೆಚ್.ಡಿ. ರೇವಣ್ಣ

Update: 2020-06-19 18:21 GMT

ಹಾಸನ, ಜೂ.19: ಈಗಾಗಲೇ ಚುನಾವಣೆ ಆಯೋಗವು ಮಲಗಿದ್ದು, ಕೂಡಲೇ ನಿದ್ರೆಯಿಂದ ಎದ್ದೇಳಲಿ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ವ್ಯಂಗ್ಯವಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಸೇರಿ ಚುನಾವಣೆ ಮೊದಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕ್ಯಾಟಗರಿ ಮಾಡಬೇಕು. ನ್ಯಾಯಾಲಯದಲ್ಲಿದೆ ಎಂದು ಸುಮ್ಮನೆ ಕುಳಿತಿದೆ. ಈ ಬಗ್ಗೆ ಕಾನೂನು ಮಂತ್ರಿ ಮತ್ತು ಸರಕಾರ ಹಾಗೂ ಅಡ್ವಕೇಟ್ ಜನರಲ್ ಹಾಗೂ ಸರಕಾರಿ ವಕೀಲರಿಗೂ ಮನವಿ ಮಾಡಲಾಗುವುದು. ದಯಮಾಡಿ ಕರ್ತವ್ಯ ನಿರ್ವಹಣೆ ಮಾಡುವಲ್ಲಿ ಯಾವ ಲೋಪ ಎಸಗಬೇಡಿ ಎಂದರು.

ಕಳೆದ ಆರು ತಿಂಗಳಿನಿಂದ ಗ್ರಾಮ ಪಂಚಾಯತನ್ನು ಏತಕ್ಕಾಗಿ ರಿಸರ್ವೇಷನ್ ಮಾಡಲಿಲ್ಲ. ಕೊರೋನ ಬಂದು ಮೂರು ತಿಂಗಳುಗಳಾಗಿದೆ. ಚುನಾವಣೆ ಆಯುಕ್ತರ ಹುದ್ದೆಯ ಗೌರವವನ್ನು ಹಾಳು ಮಾಡಬೇಡಿ, ನ್ಯಾಯಾಲಯದ ನೆಪ ಹೇಳಿಕೊಂಡು ಒಂದು ಚುನಾವಣೆ ನಡೆಸುವುದಕ್ಕೆ 2 ವರ್ಷಗಳ ಕಾಲ ಬೇಕಾ ಎಂದು ಪ್ರಶ್ನೆ ಮಾಡಿದ ಅವರು, ಇಷ್ಟು ದಿನಗಳಾದ ಮೇಲೆ ಚುನಾವಣೆಯನ್ನೆ ರದ್ದು ಮಾಡಿ ಎಂದು ಆಗ್ರಹಿಸಿದರು. ವಿರೋಧ ಪಕ್ಷವದರಾಗಿ ಚುನಾವಣಾ ಆಯೋಗವನ್ನು ಎಚ್ಚರಿಸಬೇಕಾಗಿದೆ. ಈಗಾಗಲೇ ಚುನಾವಣಾ ಆಯೋಗ ಮಲಗಿದ್ದು, ನಿದ್ರೆಯಿಂದ ಮೇಲಕ್ಕೆ ಹೇಳಬೇಕಾಗಿದೆ ಎಂದು ವ್ಯಂಗ್ಯವಾಡಿದರು. 

ಮೂರು ಸಾವಿರ ಎಕರೆಯಲ್ಲಿ ಬಿತ್ತನೆ ಆಲೂಗೆಡ್ಡೆ ಹಾಳಾಗಿ ನಷ್ಟವಾಗಿದೆ. ಈ ಬಗ್ಗೆ ಸರಕಾರ ಕೂಡಲೇ ಸ್ಪಂದಿಸಬೇಕು. ತೋಟಗಾರಿಕೆ ಇಲಾಖೆ ಕಾಲೇಜು ಮಾಡಿದರೆ ಜಿಲ್ಲೆಗೆ ಒಳ್ಳೆಯದು. ಒಳ್ಳೆ ಕೆಲಸ ನಾನು ಇಲ್ಲವೇ ಅವರು ಮಾಡಿದರೇನು ಜಿಲ್ಲೆಗೆ ಒಳ್ಳೆಯದು ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು. 

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕೆಲಸದ ಎರಡೂವರೆ ಲಕ್ಷ ಕಾಮಗಾರಿಗಾಗಿ ಚೀಪ್ ಇಂಜಿನಿಯರ್ ಗೆ ಹೋಗುವುದನ್ನು ತಪ್ಪಿಸಿ ಎಂದ ಅವರು ಈ ಸರಕಾರದ ಆಡಳಿತ ನೋಡಿದರೆ ನಾಚಿಕೆಯಾಗುತ್ತದೆ. ಬಿ.ಎಸ್. ಯಡಿಯೂರಪ್ಪ ಮತ್ತು ಈಶ್ವರಪ್ಪನವರು ಈ ಬಗ್ಗೆ ಗಮನ ನೀಡುವಂತೆ ಮನವಿ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News