ನಂಜನಗೂಡು ಪೊಲೀಸ್ ಪೇದೆಗೆ ಕೊರೋನ ಸೋಂಕು: ಪೊಲೀಸ್ ಕ್ವಾಟ್ರಸ್ ಸೀಲ್ ಡೌನ್

Update: 2020-06-20 17:57 GMT

ಮೈಸೂರು,ಜೂ.20: ಮೈಸೂರು ಜಿಲ್ಲೆಯಲ್ಲೂ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತಿದ್ದು, ನಂಜನಗೂಡಿನ ಪೊಲೀಸ್ ಪೇದೆಯೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ನಂಜನಗೂಡಿನ ಪೊಲೀಸ್ ಕ್ವಾಟ್ರಸ್ ಸೀಲ್ ಡೌನ್ ಮಾಡಲಾಗಿದೆ.

ತಮಿಳು ನಾಡಿನಿಂದ ಆಗಮಿಸಿದ್ದ ವ್ಯಕ್ತಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಆತನ ಟ್ರಾವೆಲ್ ಹಿಸ್ಟರಿ ಪತ್ತೆಮಾಡಿದಾಗ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಎಂದು ಹೇಳಲಾಗಿತ್ತು. ಹಾಗಾಗಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರಿಗೂ ಕೊರೋನ ಸೋಂಕು ತಗುಲಿರುವ ಕಾರಣ ಅವರು ವಾಸ ಮಾಡುತ್ತಿದ್ದ ಪೊಲೀಸ್ ಕ್ವಾಟ್ರಸ್ ನ ಮನೆಯ ರಸ್ತೆಯನ್ನು ಶನಿವಾರ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.

ಇವರ ಸಂಪರ್ಕ ಹೊಂದಿರುವವರನ್ನು ಪ್ರೈಮರಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಸೋಂಕಿತ ಪೊಲೀಸ್ ಪೇದೆಗೆ ನಗರದ ನೂತನ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ಪೌರಾಯುಕ್ತ ಕರಿಬಸವಯ್ಯ, ಆರೋಗ್ಯಾಧಿಕಾರಿ ವಸಂತ್, ಸಂಚಾರಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಜಯಲಕ್ಷ್ಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News