ಲಾಟರಿ ಹೊಡೆದು ಸಿಎಂ ಆದ ಸಿದ್ದರಾಮಯ್ಯರಿಗೆ ಧಮ್ ಅನ್ನೋಕೆ ಯೋಗ್ಯತೆಯಿಲ್ಲ: ಈಶ್ವರಪ್ಪ

Update: 2020-06-20 18:06 GMT

ಚಾಮರಾಜನಗರ, ಜೂ.20: ಲಾಟರಿ ಹೊಡೆದು ಸಿಎಂ ಆದ ಸಿದ್ದರಾಮಯ್ಯರಿಗೆ ಧಮ್ ಅನ್ನೋಕೆ ಯೋಗ್ಯತೆಯಿಲ್ಲ ಎಂದು ಚಾಮರಾಜನಗರದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಎರಡು ಭಾಗವಾದ್ದರಿಂದ ಸಿದ್ದರಾಮಯ್ಯ ಸಿಎಂ ಆದರು. ಅವರ ಶಕ್ತಿಯಿಂದ ಮುಖ್ಯಮಂತ್ರಿ ಆದವರಲ್ಲ ಅವರು, ಕಾಂಗ್ರೆಸ್, ಜಾತಿ ಹೆಸರಲ್ಲಿ ಲಾಭ ಮಾಡಿಕೊಂಡು ತಾವೇ ಶಕ್ತಿವಂತ ಎಂದು ಹೇಳಿಕೊಂಡರು. ಕೊನೆಯಲ್ಲಿ ಕಾಂಗ್ರೆಸ್ ಪಕ್ಷವನ್ನೇ ಮುಗಿಸಿದರು, ಸಿಎಂ ಪದವಿ ಕಳೆದುಕೊಂಡರು. ಧಮ್ ಇರುವ ವ್ಯಕ್ತಿ ಏಕೆ ಬಾದಾಮಿಗೆ ಓಡಿ ಹೋದರು, ಕುರುಬರಿಗೇಕೆ ಟಿಕೆಟ್ ಕೊಡಲಿಲ್ಲ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಮೊದಲಿನಿಂದಲೂ ಎಲ್ಲರನ್ನೂ ತುಳಿಯುತ್ತಲೇ ಬರುತ್ತಿದ್ದಾರೆ. ಸ್ವಾರ್ಥಕ್ಕೆ ಎಲ್ಲರನ್ನೂ ಬಲಿ ಪಡೆಯಲು ಯಶಸ್ವಿಯಾದರು. ಅವರೆಷ್ಟು ಕುತಂತ್ರಿ ಎಂದು ಎಚ್.ವಿಶ್ವನಾಥ್ ಅವರಿಗೆ ಚೆನ್ನಾಗಿ ತಿಳಿದಿದೆ ಎಂದರು. ಜಾತಿಯನ್ನು ಬಹಳ ಉದ್ಧಾರ ಮಾಡುತ್ತೇನೆ ಎನ್ನುತ್ತಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಎಷ್ಟು ಮಂದಿ ಕುರುಬರಿಗೆ ಅವರು ಟಿಕೆಟ್ ಕೊಡಿಸಿದ್ದಾರೆ. ರಾಜ್ಯಸಭೆಗೆ ಎಷ್ಟು ಮಂದಿ ಕುರುಬರನ್ನು ಕಳಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಪಕ್ಷ. ನಾವು ಜಾತಿಯನ್ನು ಬಳಸಿಕೊಳ್ಳುವುದಿಲ್ಲ. ಆದರೆ ಜಾತಿ ಲಾಭ ಪಡೆಯುವುದರಲ್ಲಿ ಸಿದ್ದರಾಮಯ್ಯ ಎಕ್ಸ್ ಪರ್ಟ್ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News