×
Ad

ಊರಿಗೆ ಹೋಗಿ ಮರಳದ ಪತಿ: ಪೊಲೀಸರ ಮೊರೆ ಹೋದ ಪತ್ನಿ

Update: 2020-06-20 23:43 IST

ಬೆಂಗಳೂರು, ಜೂ.20: ಲಾಕ್‍ಡೌನ್ ವೇಳೆ ಊರಿಗೆ ಹೋದ ಪತಿ ಮತ್ತೆ ವಾಪಸ್ ಬರದೇ ಇರುವುದರಿಂದ ಕಂಗಾಲಾದ ಪತ್ನಿ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ.

ಆರು ತಿಂಗಳ ಹಿಂದೆ ಸೋಮಶೇಖರ್ ಎಂಬಾತ ಕಾರವಾರದಲ್ಲಿ ಯುವತಿಯನ್ನು ಮದುವೆಯಾಗಿ ಪತ್ನಿಯನ್ನು ಕರೆದುಕೊಂಡು ಬಂದು ಸುದ್ದಗುಂಟೆಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದ. ಆರು ತಿಂಗಳು ಸಂಸಾರ ಮಾಡಿದ್ದ ಸೋಮಶೇಖರ್, ಲಾಕ್‍ಡೌನ್ ನೇಪ ಹೇಳಿ ಪತ್ನಿಯನ್ನು ಬಿಟ್ಟು ವಾಪಸ್ ಕಾರವಾರಗೆ ಹೋಗಿದ್ದ ಎನ್ನಲಾಗಿದೆ.

ಲಾಕ್‍ಡೌನ್ ಮುಗಿದರೂ ಆತ ವಾಪಸ್ ಬಂದಿಲ್ಲ. ಆತನಿಗೆ ಕರೆ ಮಾಡಿದರೆ, ಈಗ ನಿನ್ನ ಮೇಲೆ ಆಸಕ್ತಿ ಕಡಿಮೆ ಆಗಿದೆ ನಾನು ಬರುವುದಿಲ್ಲ ಎಂದು ಹೇಳುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಇದೀಗ ಮನೆಯೂ ಖಾಲಿ ಮಾಡದೇ ಬಾಡಿಗೆ ಕಟ್ಟಲಾರದೇ ಯುವತಿ ಕಂಗಾಲಾಗಿ ಗಂಡನನ್ನು ಕರೆಸಿಕೊಡುವಂತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News