ಹಂಪಿ ಕನ್ನಡ ವಿವಿಯಲ್ಲಿ ಯೋಗ ವಿಜ್ಞಾನ ಕೋರ್ಸ್ ಆರಂಭ: ಕುಲಪತಿ ಪ್ರೊ.ಸ.ಚಿ.ರಮೇಶ್

Update: 2020-06-21 17:59 GMT

ಬಳ್ಳಾರಿ, ಜೂ.21: ಮುಂದಿನ ಶೈಕ್ಷಣಿಕ ಸಾಲಿನಿಂದ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಯೋಗ ವಿಜ್ಞಾನ(ಎಂಎಸ್ಸಿ) ಕೋರ್ಸ್ ಆರಂಭಿಸಲಾಗುವುದೆಂದು ಕುಲಪತಿ ಪ್ರೊ.ಸ.ಚಿ.ರಮೇಶ್ ತಿಳಿಸಿದ್ದಾರೆ.

ರವಿವಾರ ವಿಶ್ವವಿದ್ಯಾಲಯದಲ್ಲಿ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನದಲ್ಲಿ ಯೋಗ ದಿನವು ವಿಶ್ವದ ಹಬ್ಬವಾಗಿ ಪರಿವರ್ತನೆಯಾಗುತ್ತಿದ್ದು, ವ್ಯಕ್ತಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ವೃದ್ಧಿಯಲ್ಲಿ ಗಮನಾರ್ಹವಾದ ಪಾತ್ರ ವಹಿಸುತ್ತದೆ ಎಂದರು.

ಉಸಿರಾಟದ ಸಮಸ್ಯೆ, ಬೆನ್ನುನೋವು, ಗಳಗಂಡ, ಹೃದಯಸಂಬಂಧಿ ಖಾಯಿಲೆಗಳು ಸೇರಿದಂತೆ ಹಲವು ರೋಗಗಳನ್ನು ನಿರಂತರವಾದ ಯೋಗಾಭ್ಯಾಸದಿಂದ ಗುಣಪಡಿಸಿಕೊಳ್ಳಬಹುದು. ಹಾಗೂ ಯೋಗದ ಜತೆಗೆ ಉತ್ತಮವಾದ ಆಹಾರ ಪದ್ಧತಿಯಿಂದ ಯಾವುದೇ ರೋಗ ಬರದಂತೆ ಕಾಪಾಡಿಕೊಳ್ಳಬಹುದೆಂದು ಅವರು ತಿಳಿಸಿದರು. ಈ ವೇಳೆ ಯೋಗ ಅಧ್ಯಯನ ಕೇಂದ್ರದ ನಿರ್ದೇಶಕ ಎಫ್.ಟಿ.ಹಳ್ಳಿಕೇರಿ, ಕುಲಸಚಿವ ಸುಬ್ಬಣ್ಣ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News