×
Ad

ಮೈಸೂರು: ಸುಪಾರಿ ಕೊಲೆ ಹಂತಕರ ಬಂಧನ; ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ, ವಾಹನ ಜಪ್ತಿ

Update: 2020-06-23 00:03 IST

ಮೈಸೂರು,ಜೂ.22: ಮೈಸೂರು ಪೊಲೀಸರು ಕಾರ್ಯಾಚರಣೆ ನಡೆಸಿ ಸುಪಾರಿ ಕೊಲೆ ಹಂತಕರನ್ನ ಪತ್ತೆ ಮಾಡಿ  ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ಮೂಲದ ನವೀನ್, ಪ್ರಶಾಂತ್, ಅಶೋಕ್, ಜಾನಿ, ದಿನೇಶ್, ಮಹೇಶ್, ಮುಬಾರಕ್ ಬಂಧಿತ ಆರೋಪಿಗಳು. ಅಶ್ರಿತ್ ಎಂಬುವವರನ್ನ ಬಂಧಿತ ಆರೋಪಿಗಳು ಕೊಲೆಗೈದಿದ್ದರು ಎನ್ನಲಾಗಿದೆ. ಮೈಸೂರು ನಗರ ಮತ್ತು ವಿಜಯನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ ಎರಡು ಬೈಕ್, ಕಾರು, ಚಾಕನ್ನ ವಶಕ್ಕೆ ಪಡೆದಿದ್ದಾರೆ.

ಕೊಲೆಗೆ ಸುಫಾರಿ ನೀಡಿದ್ದ ಪ್ರಮುಖ ಆರೋಪಿ ರಾಜರಾಂ ಮತ್ತು ಇತರರು ತಲೆಮರಿಸಿಕೊಂಡಿದ್ದು ಇವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮೃತ ಅಶ್ರಿತ್ ಎಂಬುವವರು ಆರೋಪಿ ರಾಜರಾಂ ನ ಹೇರ್ ಅಂಡ್ ಸ್ಕಿನ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ಮಧ್ಯೆ ವೃತ್ತಿಯಲ್ಲಿ ವೈಷಮ್ಯದಿಂದಾಗಿ ಮೃತ ಅಶ್ರಿತ್ ಸ್ವಂತ ವ್ಯವಹಾರ ಪ್ರಾರಂಭಿಸಿದ್ದರು. ಇದನ್ನ ಸಹಿಸಿಕೊಳ್ಳದ ಆರೋಪಿ ರಾಜರಾಂ ಅಶ್ರಿತ್ ಕೊಲೆಗೆ ಸುಪಾರಿ ನೀಡಿದ್ದನು. ಈ ನಡುವೆ ದುಷ್ಕರ್ಮಿಗಳು ಜೂನ್ 17 ರಂದು ಆಶ್ರಿತ್ ರನ್ನ ಕೊಲೆಗೈದು ಪರಾರಿಯಾಗಿದ್ದರು. ಇದೀಗ ಹತ್ಯೆಯ ಹಂತಕರು ಸೆರೆ ಸಿಕ್ಕಿದ್ದು ಪ್ರಮುಖ ಆರೋಪಿ ರಾಜರಾಂಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News