×
Ad

ಸುರಪುರ: ಜಿಲ್ಲಾ ಪಂಚಾಯತ್ ಸದಸ್ಯನ ಮೇಲೆ ಹಲ್ಲೆ: ದುಷ್ಕರ್ಮಿಗಳು ಪರಾರಿ

Update: 2020-06-24 15:23 IST

ಸುರಪುರ : ತಾಲೂಕಿನ ಖಾನಾಪುರ ಎಸ್.ಎಚ್ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯ ಮರ್ಲಿಂಗಪ್ಪ ಕರ್ನಾಳ ಮೇಲೆ ಯಾದಗಿರೆಯಲ್ಲಿ ದುಷ್ಕರ್ಮಿಗಳು ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.

ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಸಮೀಪ ಕಾರಿನಲ್ಲಿ ಬಂದ ನಾಲ್ವರು ಹಂತಕರು ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.

ಸ್ಥಳಕ್ಕೆ ಇಲ್ಲಿನ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಹಳೆ ವೈಷಮ್ಯದ ಹಿನ್ನೆಯಲ್ಲಿ ಹಲ್ಲೆ ನಡೆಸಿರಬಹುದೆಂದು ಶಂಕಿಸಲಾಗಿದೆ. ನಿಖರವಾದ ಕಾರಣ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News