ತುಮಕೂರು : ಬೋರ್‌ವೆಲ್ ಕೊರೆಸಿದ ವಿಚಾರ ; ದಲಿತ ವ್ಯಕ್ತಿಗೆ ಹಲ್ಲೆ
Update: 2020-06-24 15:33 IST
ತುಮಕೂರು : ಬೋರ್‌ವೆಲ್ ಕೊರೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ತಿಪ್ಪಾಪುರ ಗ್ರಾಮದ ದಲಿತ ವ್ಯಕ್ತಿ ಹನುಮಂತಪ್ಪ ಮೇಲೆ ತಂಡವೊಂದು ಹಲ್ಲೆ ನಡೆಸಿದೆ.
ಗ್ರಾಮ ಪಂ. ಅಧ್ಯಕ್ಷ ಅಶ್ವತ್ಥಪ್ಪ ಮತ್ತು ಆತನ ಸೋದರ ನರಸಿಂಹಮೂರ್ತಿ ಹನುಮಂತಪ್ಪರಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದ್ದು ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.