ದುಬೈ: ಮನೆಗೆ ನುಗ್ಗಿದ ಪಾಕ್ ವ್ಯಕ್ತಿಯಿಂದ ಭಾರತೀಯ ದಂಪತಿ ಹತ್ಯೆ

Update: 2020-06-25 06:23 GMT

ದುಬೈ : ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದ ಪಾಕಿಸ್ತಾನಿ ವ್ಯಕ್ತಿಯೊಬ್ಬ ಭಾರತೀಯ ಮೂಲದ ಉದ್ಯಮಿ ಹಾಗೂ ಅವರ ಪತ್ನಿಯನ್ನು ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಹಿರೇನ್ ಅಧಿಯಾ ಹಾಗೂ ವಿಧಿ ಅಧಿಯಾ ಅವರನ್ನು ಅರೇಬಿಯನ್ ರಾಂಚೆಸ್‌ನ ವಿಲ್ಲಾದಲ್ಲಿ ಹತ್ಯೆ ಮಾಡಲಾಗಿದೆ. ಘಟನೆ ನಡೆದ 24 ಗಂಟೆಯ ಒಳಗಾಗಿ ಪಾಕಿಸ್ತಾನ ಮೂಲದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತ ದಂಪತಿಯ ಪುತ್ರಿ ದುಬೈ ಪೊಲೀಸ್ ಕಮಾಂಡ್ ರೂಮ್‌ಗೆ ಕರೆ ಮಾಡಿ, ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಗಿ ಅಪರಾಧ ತನಿಖಾ ಇಲಾಖೆ ನಿರ್ದೇಶಕ ಬ್ರಿಗೇಡಿಯರ್ ಜಮಾಲ್ ಅಲ್ ಜಲ್ಲಫ್ ಹೇಳಿದ್ದಾರೆ.

ಗಸ್ತು ಮತ್ತು ವಿಧಿವಿಜ್ಞಾನ ತಜ್ಞರು ಎರಡು ಮಹಡಿಯ ವಿಲ್ಲಾಗೆ ತೆರಳಿ ತಪಾಸಣೆ ನಡೆಸಿದ್ದಾರೆ. ತಂದೆ ಕಂಪನಿಯೊಂದರಲ್ಲಿ ಎಕ್ಸಿಕ್ಯೂಟಿವ್ ಮೆನೇಜರ್ ಆಗಿದ್ದು, ಅವರು ಹಾಗೂ ಪತ್ನಿ ಹತ್ಯೆಗೀಡಾಗಿದ್ದಾರೆ. ಈ ದಂಪತಿ 18 ಹಾಗೂ 13 ವರ್ಷದ ಪುತ್ರಿಯರನ್ನು ಅಗಲಿದ್ದಾರೆ.

ಜೂನ್ 18ರಂದು ಕುಟುಂಬ ನಿದ್ರೆಯಲ್ಲಿದ್ದಾಗ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿದ ದರೋಡೆಕೋರರು ಹಣದ ಪರ್ಸ್ ಕಳವು ಮಾಡಿದ್ದಾರೆ. ಇನ್ನಷ್ಟು ಅಮೂಲ್ಯ ವಸ್ತುಗಳನ್ನು ಕದಿಯುವ ಸಲುವಾಗಿ ಬೆಡ್‌ರೂಂಗೆ ಹೋಗಿದ್ದಾರೆ. ವ್ಯಕ್ತಿಗೆ ಎಚ್ಚರವಾದಾಗ ಆರೋಪಿ ಚಾಕುವಿನಿಂದ ಇರಿದಿದ್ದಾನೆ. ಪತ್ನಿಯೂ ಎಚ್ಚರಗೊಂಡಾಗ ಆಕೆಯನ್ನೂ ಇರಿದು ಸಾಯಿಸಿದ್ದಾನೆ. ಇದನ್ನು 18 ವರ್ಷದ ಪುತ್ರಿ ನೋಡಿದಾಗ ಆಕೆಯ ಕತ್ತನ್ನು ಚಾಕುವಿನಿಂದ ಇರಿದು ಪರಾರಿಯಾದರು ಎಂದು ಬ್ರಿಗೇಡಿಯರ್ ಜಲಫ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News