×
Ad

ಮೈಸೂರು ಜಿಲ್ಲೆಯಲ್ಲಿ ಇಂದು 22 ಮಂದಿಗೆ ಕೊರೋನ ಪಾಸಿಟಿವ್, ವೃದ್ಧರೊಬ್ಬರು ಬಲಿ

Update: 2020-06-26 00:03 IST

ಮೈಸೂರು,ಜೂ.25: ಮೈಸೂರಿನಲ್ಲಿ ದಿನೇ ದಿನೇ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಗುರುವಾರ ಒಂದೇ ದಿನ  22 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದ್ದಾರೆ.

ಕೆ.ಆರ್.ನಗರದ 87 ವರ್ಷದ ವಯೋವೃದ್ಧರು ಬೆಂಗಳೂರಿನಿಂದ ಜೂ.15 ರಂದು ಮೈಸೂರಿಗೆ ಆಗಮಿಸಿದ್ದರು. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮೊದಲಿಗೆ ಕೆ.ಆರ್.ನಗರ ಟೌನ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜೂ. 23 ರಂದು ಹೃದಯಾಘತದಿಂದ ಸಾವನ್ನಪ್ಪಿದ್ದು ಇವರ ಗಂಟಲು ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಅವರಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿದೆ ಎಂದು ಹೇಳಿದ್ದಾರೆ.

ಇಂದು ಒಂದೇ ದಿನ 22 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಓರ್ವ ಗರ್ಭಿಣಿ ಮಹಿಳೆ, ಆರೋಗ್ಯ ಸಹಾಯಕ, ಲಾರಿ ಚಾಲಕ, ಸೋಂಕಿತರ ಸಂಪರ್ಕದಲ್ಲಿದ್ದ ಏಳು ಮಂದಿ, ಹೊರ ಜಿಲ್ಲೆಯ ಆಗಮಿಸಿದ್ದ ಏಳು ಮಂದಿ, ಹೊರ ರಾಜ್ಯಗಳಿಂದ ಬಂದ ಇಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

ಇಂದು ಐದು ಮಂದಿ ಕೊರೋನ ಸೋಂಕಿತರು ಸೇರಿದಂತೆ ಇದುವರೆಗೆ ಒಟ್ಟು 125 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ 95 ಕೊರೋನ ಸೋಂಕಿತರು ನಗರದ ನೂತನ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಜಿಲ್ಲೆಯಲ್ಲಿ ಒಟ್ಟು 220 ಮಂದಿಗೆ ಕೊರೋನ ಸೋಂಕು ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News