×
Ad

ಯುವಕನ ಕೊಲೆಗೈದು ಮೃತದೇಹವನ್ನು ಬೈಕಿನ ಮೇಲೆ ಮಲಗಿಸಿದ ದುಷ್ಕರ್ಮಿಗಳು

Update: 2020-06-26 12:46 IST

ಹನೂರು, ಜೂ.26: ಯುವಕನೋರ್ವನನ್ನು ತಲೆ ಹಿಂಭಾಗಕ್ಕೆ ಬಲವಾಗಿ ಹೊಡೆದು ಕೊಲೆ ಮಾಡಿರುವ ಘಟನೆ ಮಲೆ ಮಹದೇಶ್ವರಬೆಟ್ಟದ ಸಮೀಪ ತಾಳಬೆಟ್ಟದ ತಪ್ಪಲಿನಲ್ಲಿ ಗುರುವಾರ ಸಂಜೆ ನಡೆದಿದೆ.

ತಾಲೂಕಿನ ಮಲೆ ಮಹದೇಶ್ವರಬೆಟ್ಟ ಗ್ರಾಮದ ಮಹದೇವ ಪ್ರಸಾದ್ ಅಲಿಯಸ್ ಪುನೀತ್ (28) ಕೊಲೆಯಾದ ಯುವಕ.

ಇವರು ಮ.ಬೆಟ್ಟ ಗ್ರಾಮ ಪಂಚಾಯತ್ ನಲ್ಲಿ ವಾಟರ್ ಮ್ಯಾನ್ ಆಗಿದ್ದರು. ಪುನೀತ್ ಅವರು ಅನಿವಾರ್ಯ ಕೆಲಸ ನಿಮಿತ್ತಾ ಹನೂರು ಕಡೆಗೆ ತೆರಳುತ್ತಿದ್ದ ವೇಳೆ ಈ ಕೊಲೆ ನಡೆದಿದೆಯೆನ್ನಲಾಗಿದೆ.

ತಾಳಬೆಟ್ಟದ ಮುಖ್ಯರಸ್ತೆಯಲ್ಲಿ ದುಷ್ಕರ್ಮಿಗಳು ಪುನೀತ್ ತಲೆಯ ಹಿಂಭಾಗಕ್ಕೆ ಹೊಡೆದು ಕೊಲೆ ಮಾಡಿ ರಸ್ತೆಯಲ್ಲೆ ಬೈಕ್ ಮೇಲೆ ಮಲಗಿಸಿ ಹೋಗಿರುವುದು ಪತ್ತೆಯಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮ.ಬೆಟ್ಟದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಶಾಸಕ ಆರ್. ನರೇಂದ್ರ ಹನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಮೃತ ಕುಟುಂಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ತನಿಖೆ ನಡೆಸಿ ಕೊಲೆ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಪೊಲೀಸದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News