13 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರಕಾರ

Update: 2020-06-26 17:19 GMT

ಬೆಂಗಳೂರು, ಜೂ.26: ಮಂಗಳೂರಿನ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಸೇರಿದಂತೆ 13 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಮಂಗಳೂರಿನ ನಗರದ ನೂತನ ಪೊಲೀಸ್‌ ಆಯುಕ್ತರಾಗಿ ವಿಕಾಸ್ ಕುಮಾರ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದ್ದು, ಪ್ರಸ್ತುತ ಕಮಿಷನರ್‌ ಆಗಿರುವ ಡಾ.ಪಿ.ಎಸ್. ಹರ್ಷ ಅವರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಸ್ಥಾನಕ್ಕೆ ವರ್ಗಾಯಿಸಲಾಗಿದೆ.

ಅದೇ ರೀತಿ, ಸೀಮಂತ್ ‌ಕುಮಾರ್ ಸಿಂಗ್ ಅವರನ್ನು ಕೇಂದ್ರ ವಲಯದ ಐಜಿಪಿ ಸ್ಥಾನಕ್ಕೆ, ಕೆ.ವಿ ಶರತ್‌ ಚಂದ್ರ - ಐಜಿಪಿ ಆಡಳಿತ ವಿಭಾಗ (ಬೆಂಗಳೂರು)ಸ್ಥಾನಕ್ಕೆ, ಸುಮನ್ ಪನ್ನೇಕರ್- ಡಿಸಿಪಿ ಸಿಎಆರ್ (ಬೆಂಗಳೂರು)ಸ್ಥಾನಕ್ಕೆ, ಎಚ್.ಡಿ ಆನಂದ‌ ಕುಮಾರ್- ಎಸ್.ಪಿ ಐಎಸ್‌ಡಿ, ಎಸ್.ಎನ್ ಸಿದ್ದರಾಮಪ್ಪ - ಡಿಐಜಿ ಸಿಐಡಿ (ಆರ್ಥಿಕ ಅಪರಾಧ ವಿಭಾಗ) ಸ್ಥಾನಕ್ಕೆ ವರ್ಗಾಯಿಸಲಾಗಿದೆ.

ಬಿ.ಎಸ್ ಲೋಕೇಶ್ ಕುಮಾರ್ - ಡಿಐಜಿ ಐಎಸ್‌ಡಿ, ಡಾ.ಕೆ.ತ್ಯಾಗರಾಜನ್ - ಬೆಳಗಾವಿ ನಗರ ಪೊಲೀಸ್ ಆಯುಕ್ತ, ಕ್ಷಮಾ ಮಿಶ್ರಾ - ಕೊಡಗು ಎಸ್ಪಿ, ಹರೀಶ್ ಪಾಂಡೆ‌ - ಗುಪ್ತಚರ ಇಲಾಖೆ (ಬೆಂಗಳೂರು) ಎಸ್ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.

ದಿವ್ಯಾ ಸಾರಾ ಥಾಮಸ್ - ಎಸ್ಪಿ ಚಾಮರಾಜನಗರ, ಹಾಕಯ್ ಅಕ್ಷಯ್ ಮಚ್ಚೀಂದ್ರ - ಎಸ್ಪಿ (ಚಿಕ್ಕಮಗಳೂರು) ಇಲ್ಲಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News