ಎಸ್ಕೆಎಸ್ಸೆಸ್ಸೆಫ್ 'ಮರಳಿ‌ ಗೂಡಿಗೆ ಸಾಂತ್ವನ': ರಿಯಾದ್ ನಿಂದ ಮಂಗಳೂರಿಗೆ ವಿಮಾನ ವ್ಯವಸ್ಥೆ

Update: 2020-06-27 12:00 GMT

ಮಡಿಕೇರಿ, ಜೂ.27: ಎಸ್ಕೆಎಸ್ಸೆಸ್ಸೆಫ್ ಜಿಸಿ‌ಸಿ‌ ಕೊಡಗು ಘಟಕದ ವತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಗಲ್ಫ್ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಕಳುಹಿಸುವ 'ಮರಳಿ ಗೂಡಿಗೆ ಸಾಂತ್ವನ' ಎಂಬ ವಿಶೇಷ ಕಾರ್ಯಕ್ರಮ ಯು.ಎ.ಇ ಯಿಂದ ಆರಂಭಗೊಂಡು ಇದೀಗ ಸೌದಿ ಅರೇಬಿಯಾದವರೆಗೂ ವಿಸ್ತರಣೆ ಮಾಡಿದ್ದೇವೆ ಎಂದು ಕೊಡಗು ಜಿಸಿಸಿ‌ ಘಟಕದ ಅಧ್ಯಕ್ಷ ಹುಸೈನ್ ಫೈಝಿ ತಿಳಿಸಿದ್ದಾರೆ.

ಸೌದಿ ಅರೇಬಿಯಾದ ರಿಯಾದ್- ನಿಂದ ಮಂಗಳೂರಿಗೆ ಸದ್ಯದಲ್ಲೇ ವಿಮಾನ ಪ್ರಯಾಣ ಬೆಳೆಸಲಿದ್ದು, ತೆರಳಲು ಇಚ್ಛಿಸುವವರು ತಮ್ಮ ಅಧಿಕೃತ ದಾಖಲಾತಿಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ಕರ್ನಾಟಕ ರಾಜ್ಯದವರಿಗೆ ಮೊದಲ ಆದ್ಯತೆ ನೀಡಲಾಗುವುದೆಂದು ಹುಸೈನ್ ಫೈಝಿ ಮಾಹಿತಿ ನೀಡಿದ್ದಾರೆ.

ಭಾರತೀಯ ರಾಯಭಾರಿ ಕಚೇರಿಯ ಅಧಿಕೃತ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿದವರನ್ನು ಮಾತ್ರ ಪರಿಗಣನೆ ಮಾಡಲಾಗುವುದು. ಇಂಡಿಯನ್ ಕಾನ್ಸುಲೇಟ್ ಸೈಟ್ ನಲ್ಲಿ ರಿಜಿಸ್ಟರ್ ಮಾಡದವರನ್ನು ಪರಿಗಣಿಸುವುದಿಲ್ಲ. ಟಿಕೆಟ್ ದರ 2,000 ರಿಯಾಲ್ ಆಗಿದ್ದು, ಹಣ ಪಾವತಿ ಮತ್ತು ಯಾತ್ರಾ ದಿನಾಂಕದ ಬಗ್ಗೆ ಸದ್ಯದಲ್ಲೇ ತಿಳಿಸಲಾಗುವುದೆಂದು ಹುಸೈನ್ ಫೈಝಿ ತಿಳಿಸಿದ್ದಾರೆ.

ಸೌದಿ ಅರೇಬಿಯಾದ ರಿಯಾದ್ ನಿಂದ ಮಂಗಳೂರಿಗೆ ತೆರಳಲು ಇಚ್ಛಿಸುವವರು ಸರ್ಕಾರದ ನಿಯಮದಂತೆ ಕ್ವಾರಂಟೈನ್ ವ್ಯವಸ್ಥೆಗೆ ಬದ್ಧರಾಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 00966597291921,00966509583703,0096650634310 ಯನ್ನು ಸಂಪರ್ಕಿಸಲು ಜಿಸಿಸಿ ಕೊಡಗು ಘಟಕದ ಹುಸೈನ್ ಫೈಝಿ ಕೋರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News