ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯಲ್ಲಿ ಕೊರೋನ ಪಾಸಿಟಿವ್: ಹಾಸನ ಜಿಲ್ಲಾಧಿಕಾರಿ ಗಿರೀಶ್

Update: 2020-06-27 14:52 GMT

ಹಾಸನ, ಜೂ.27: ಹಾಸನ ಜಿಲ್ಲೆಯಲ್ಲಿ ಶನಿವಾರ 16 ಕೊರೋನ ಸೋಂಕಿನ ಪ್ರಕರಣ ದಾಖಲಾಗಿದ್ದು, ಇವರಲ್ಲಿ ಓರ್ವ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯಲ್ಲೂ ಸೋಂಕು ಇರುವುದು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ 16 ಕೊರೋನ ಪ್ರಕರಣಗಳು ವರದಿಯಾಗಿದ್ದು, ಒಟ್ಟು 331 ಪ್ರಕರಣಗಳು ಹಾಸನ ಜಿಲ್ಲೆಯಲ್ಲಿ ದಾಖಲಾಗಿದೆ. ಚಿಕಿತ್ಸೆ ಪಡೆದು ಗುಣಮುಖರಾಗಿ 238 ಜನರು ಬಿಡುಗಡೆಯಾಗಿದ್ದಾರೆ. ಮೈಸೂರಿನ ಸಾಲಿಗ್ರಾಮ ವ್ಯಕ್ತಿ ಹೊಳೆನರಸೀಪುರದಲ್ಲಿ ಚಿಕಿತ್ಸೆಗೆ ಬಂದಾಗ ಪಾಸಿಟಿವ್ ಪತ್ತೆ ಸೇರಿ 4, ಅರಕಲಗೂಡಿನಲ್ಲಿ 3 ಪ್ರಕರಣ, ಅರಸೀಕೆರೆಯಲ್ಲಿ 6 ಹಾಗೂ ಹಾಸನದಲ್ಲಿ 2 ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯಲ್ಲಿ ಕೊರೋನ ಸೋಂಕು ಕಂಡು ಬಂದಿದೆ. ಓರ್ವ ವಿದ್ಯಾರ್ಥಿ ಕಳೆದ ಎರಡು ದಿನಗಳ ಹಿಂದೆ ಡೆಂಗ್ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಸೇರಿದ್ದಾನೆ. ನಂತರ ಸರಕಾರಿ ಆಸ್ಪತ್ರೆಗೆ ಬಂದಿದ್ದು, ಈ ವೇಳೆ ಡೆಂಗ್ ಜೊತೆಗೆ ಕೋವಿಡ್ ಪರೀಕ್ಷೆ ಮಾಡಿದ್ದು, ವರದಿಯಲ್ಲಿ ಕೋವಿಡ್ ಲಕ್ಷಣಗಳು ಇರಲಿಲ್ಲ. ಪರೀಕ್ಷೆ ಬರೆಯಲು ಕೊಠಡಿಗೆ ಬರುವಾಗಲೂ ಜ್ವರದ ಲಕ್ಷಣಗಳು ಕಾಣಿಸಲಿಲ್ಲ. ಈ ಕಾರಣಕ್ಕೆ ಒಳಗೆ ಬಿಡಲಾಗಿದ್ದು, ಪರೀಕ್ಷೆ ಬರೆಯುವಾಗ ಆತನ ಕೊರೋನ ವರದಿ ಬಂದಿದ್ದು, ಕೊರೋನ ಇರುವುದು ದೃಢಪಟ್ಟಿದೆ. ಈತನ ಜೊತೆ 18 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಪಾಸಿಟಿವ್ ಇರುವ ಹುಡುಗ ಮುಂದಿನ ಪರೀಕ್ಷೆ ಬರೆಯುವ ಹಾಗಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News