ಬೆಂಗಳೂರು-ಬೆಳಗಾವಿ ಸೂಪರ್ ಫಾಸ್ಟ್ ರೈಲು ಪುನರಾರಂಭ
Update: 2020-06-27 20:24 IST
ಹುಬ್ಬಳ್ಳಿ, ಜೂ.27: ಮಾರ್ಚ್ ನಲ್ಲಿ ಲಾಕ್‍ಡೌನ್ ಘೋಷಣೆಯಾದ ಬಳಿಕ ಸ್ಥಗಿತಗೊಂಡಿದ್ದ ಕೆಎಸ್‍ಆರ್ ಬೆಂಗಳೂರು-ಬೆಳಗಾವಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಿಶೇಷ ರೈಲು ಬೆಂಗಳೂರಿನಿಂದ ಪುನರಾರಂಭವಾಗಿದೆ.
ಈ ರೈಲು ಶನಿವಾರದಿಂದ ಕಾರ್ಯಾಚರಣೆ ಆರಂಭಿಸಿದೆ. ಇಂದು ರಾತ್ರಿ 9 ಗಂಟೆಗೆ ಬೆಳಗಾವಿಯಿಂದ ಹೊರಟು ಮರುದಿನ 7.25ಕ್ಕೆ ಬೆಂಗಳೂರು ತಲುಪಲಿದೆ ಎಂದು ನೈರುತ್ಯರೈಲ್ವೆಯ ಪ್ರಕಟಣೆ ತಿಳಿಸಿದೆ. ಈ ರೈಲು ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ರದ್ದು: ಲಾಕ್‍ಡೌನ್ ತೆರವಾದ ಬಳಿಕ ಮೇನಲ್ಲಿ ವಾರದಲ್ಲಿ ಮೂರು ದಿನ ಕೆಎಸ್‍ಆರ್ ಬೆಂಗಳೂರು-ಬೆಳಗಾವಿ ನಡುವೆ ಹಗಲಿನಲ್ಲಿ ಸಂಚರಿಸುತ್ತಿದ್ದ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಿಶೇಷ ರೈಲಿನ ಸಂಚಾರವನ್ನು ಜೂ. 29 ರಿಂದ ಬೆಳಗಾವಿಯಿಂದ, 30ರಿಂದ ಬೆಂಗಳೂರಿನಿಂದ ರದ್ದು ಮಾಡಲಾಗಿದೆ.