ಪಕ್ಕದ ಮನೆ ವ್ಯಕ್ತಿಗೆ ಕೊರೋನ ಸೋಂಕು: ಐಸೋಲೇಷನ್‍ಗೆ ಒಳಗಾದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

Update: 2020-06-28 11:22 GMT

ಬೆಂಗಳೂರು, ಜೂ. 28: `ನನ್ನ ನಿವಾಸದ ಪಕ್ಕದ ಮನೆಯವರಿಗೆ ಕೊರೋನ ಸೋಂಕು ದೃಢಪಟ್ಟಿರುವುದರಿಂದ ನಾನು ಐಸೋಲೇಷನ್‍ಗೆ ಒಳಪಡುವ ಅನಿವಾರ್ಯತೆ ಎದುರಾಗಿದೆ' ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

'ಈ ಸಮಯದಲ್ಲಿ ನಾನು ಯಾರನ್ನೂ ಖುದ್ದಾಗಿ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಆದುದರಿಂದ, ತಮ್ಮ ಸುರಕ್ಷತೆ ದೃಷ್ಟಿಯಿಂದ ನನ್ನನ್ನು ನಿವಾಸದ ಬಳಿ ಭೇಟಿ ಮಾಡಲು ತಾವು ಮುಂದಾಗಬಾರದು' ಎಂದು ಪ್ರಿಯಾಂಕ್ ಖರ್ಗೆ ಇದೇ ಸಂದರ್ಭದಲ್ಲಿ, ಸಾರ್ವಜನಿಕರು ಮತ್ತು ಕ್ಷೇತ್ರದ ಮತದಾರರಿಗೆ ಮನವಿ ಮಾಡಿದ್ದಾರೆ.

'ಯಾವುದೇ ಸಮಸ್ಯೆಗಳಿದ್ದರೆ ಅಥವಾ ಇನ್ನಿತರ ಸಲಹೆಗಳಿದ್ದರೆ, ನನ್ನನ್ನು ಭೇಟಿ ಮಾಡುವ ಬದಲು ನೇರವಾಗಿ ನನಗೆ ಕರೆ ಮಾಡಿ ಚರ್ಚಿಬಹುದು' ಎಂದು ಪ್ರಿಯಾಂಕ್ ಖರ್ಗೆ ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News