ಒಂದು ವಾರದಲ್ಲಿ ಮೂರು ದೇಶಗಳಲ್ಲಿ ಪ್ರಶಂಸೆಗೊಳಗಾದ ಬ್ಲಡ್ ಡೋನರ್ಸ್ ಮಂಗಳೂರು

Update: 2020-06-28 15:31 GMT

ಮಂಗಳೂರು, ಜೂ.27: ಇಂಡಿಯನ್ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲೆಯ ಸಾರಥ್ಯದಲ್ಲಿ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ರಕ್ತದಾನದ ಜಾಗೃತಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕಳೆದ ಏಳು ವರ್ಷಗಳಿಂದ ಸಾಮಾಜಿಕ ರಂಗದಲ್ಲಿ ಅದರಲ್ಲೂ ವಿಶೇಷವಾಗಿ ರಕ್ತದಾನ ಪೂರೈಕೆಯಲ್ಲಿ ಸಾಧನೆ ಮಾಡಿ ರೋಗಿಗಳ ಪಾಲಿನ ಆಶಾಕಿರಣವಾಗಿರುವ ಬ್ಲಡ್ ಡೋನರ್ಸ್ ಮಂಗಳೂರು(ರಿ.) ಇದರ ಸ್ಥಾಪಕಾಧ್ಯಕ್ಷ ಸಿದ್ದೀಕ್ ಮಂಜೇಶ್ವರ ಇವರ ನೇತೃತ್ವದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನವಾಝ್ ಕಲ್ಲರಕೋಡಿ, ತುರ್ತು ರಕ್ತ ಪೂರೈಕೆಯಲ್ಲಿ ವಿಶೇಷ ಸಾಧನೆ ಮಾಡಿರುವ ಬ್ಲಡ್ ಡೋನರ್ಸ್ ಮಂಗಳೂರು(ರಿ.) ಕಾರ್ಯ ನಿರ್ವಾಹಕರಾದ ಅಬ್ದುಲ್ ರಝಾಕ್ ಸಾಲ್ಮರ ಹಾಗೂ ಇಮ್ರಾನ್ ಉಪ್ಪಿನಂಗಡಿ ಇವರನ್ನು ಪ್ರಮಾಣ ಪತ್ರದೊಂದಿಗೆ ಸ್ಮರಣಿಕೆ ನೀಡಿ ದ.ಕ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಅವರು ಸನ್ಮಾನಿಸಿದರು.

ಸೌದಿ ಅರೇಬಿಯಾ

• ದಮಾಮ್
ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಜೂನ್ 14 ರಂದು ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಇಂಡಿಯನ್ ಸೋಶಿಯಲ್ ಫಾರಂ ದಮಾಮ್ ಇದರ ಅಧೀನದಲ್ಲಿ ಸೌದಿ ಅರೇಬಿಯಾದ ಕಿಂಗ್ ಫಹದ್ ಸ್ಪೆಷಲಿಸ್ಟ್ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದ ಯಶಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿ, ದಮಾಮ್ ಕಿಂಗ್ ಪಹದ್ ಸ್ಪೆಷಲಿಸ್ಟ್ ಆಸ್ಪತ್ರೆಯ ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು ಮತ್ತು ರಕ್ತದಾನ ಶಿಬಿರದ ರೂವಾರಿ ಪರ್ಝಾನ್ ಸಿದ್ದಕಟ್ಟೆ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

• ಅಫರ್ ಅಲ್ ಬಾತಿನ್
ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಇಂಡಿಯನ್ ಸೋಷಿಯಲ್ ಫೋರಂ, ಕರ್ನಾಟಕ - ಹಫರ್ ಅಲ್ ಬಾತಿನ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಜಂಟಿ ಸಹಭಾಗಿತ್ವದಲ್ಲಿ ಸೆಂಟ್ರಲ್ ಬ್ಲಡ್ ಬ್ಯಾಂಕ್ ಹಫರ್ ಅಲ್ ಬಾತಿನ್, ಸೌದಿ ಅರೇಬಿಯಾ ಇದರ ಸಹಕಾರದೊಂದಿಗೆ ನಡೆದ ರಕ್ತದಾನ ಶಿಬಿರದ ಆಯೋಜನೆಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಗೆ ಮತ್ತು ಯಶಸ್ವಿನ ರೂವಾರಿ ಇರ್ಶಾದ್ ಉಚ್ಚಿಲ ಇವರನ್ನು ಸೆಂಟ್ರಲ್ ಬ್ಲಡ್ ಬ್ಯಾಂಕ್ ಹಫರ್ ಅಲ್ ಬಾತಿನ್ ಮುಖ್ಯಸ್ಥರು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ದುಬೈ
• ಕೋವಿಡ್ ಸಂದಿಗ್ಧ ಪರಿಸ್ಥಿತಿಯ ಸಂದರ್ಭದಲ್ಲಿ ತುರ್ತು ರಕ್ತದ ಅವಶ್ಯಕತೆಗೆ ಅನುಗುಣವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಿದ ಬ್ಲಡ್ ಡೋನರ್ ಮಂಗಳೂರು ಕಾರ್ಯವೈಖರಿಯನ್ನು ಮೆಚ್ಚಿ ದಬೈ ಹೆಲ್ತ್ ಅಥಾರಿಟಿ ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯನ್ನು ಮತ್ತು ದುಬೈ ಕಾರ್ಯನಿರ್ವಹಕರನ್ನು ಹಾಗೂ ಸದಸ್ಯರಾದ ಮಹಮ್ಮದ್ ಶಫ್ಫಾಫ್ ಗಂಜಿಮಟ್ಟ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News