ಕೋವಿಡ್ ಪರೀಕ್ಷಾ ವರದಿ ಫಲಿತಾಂಶ ಗೌಪ್ಯವಾಗಿಡತಕ್ಕದ್ದು: ಸಚಿವ ಶ್ರೀರಾಮುಲು
Update: 2020-06-28 22:02 IST
ಬೆಂಗಳೂರು, ಜೂ. 28: ಕೋವಿಡ್-19 ಮಾದರಿಗಳ ಪರೀಕ್ಷೆಗಳ ಸರಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳಲ್ಲಿ ಐಸಿಎಂಆರ್ ನಿಂದ ಅನುಮತಿ ನೀಡಲಾಗಿದೆ. ಇಲ್ಲಿ ಪರೀಕ್ಷಿಸಲಾಗುವ ವರದಿಗಳ ಫಲಿತಾಂಶವನ್ನು ಗೌಪ್ಯವಾಗಿ ಇಡತಕ್ಕದ್ದು' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ನಿರ್ದೇಶನ ನೀಡಿದ್ದಾರೆ.
ರವಿವಾರ ಈ ಸಂಬಂಧ ಟ್ವೀಟ್ ಮಾಡಿರುವ ಅವರು, 'ಕೋವಿಡ್ ಸೋಂಕಿತರ ಯಾವುದೇ ಫಲಿತಾಂಶವನ್ನು ಐಸಿಎಂಆರ್ ಪೋರ್ಟಲ್‍ನಲ್ಲಿ ದಾಖಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ' ಎಂದು ಅವರು ತಿಳಿಸಿದ್ದಾರೆ.
ಸರಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳಲ್ಲಿನ ವರದಿಗಳನ್ನು ಸಂಬಂಧಪಟ್ಟ ಜಿಲ್ಲಾ ಕಾರ್ಯಪಡೆ ಅಧಿಕಾರಿ, ಕೋವಿಡ್ ನಿಯಂತ್ರಣ ಪಡೆಯ ಮುಖ್ಯಸ್ಥರು ಅಥವಾ ಬಿಬಿಎಂಪಿ ಸೇರಿದಂತೆ ರಾಜ್ಯ ಸರಕಾರದ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಬೇಕು ಎಂದು ಸುತ್ತೋಲೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.