ವಧುವಿನ ಸಹೋದರಿಗೆ ಕೊರೋನ ದೃಢ: ಮದುವೆ ಮುಂದೂಡಿಕೆ, ವಧು ಸೇರಿ 19 ಮಂದಿಗೆ ಕ್ವಾರಂಟೈನ್
Update: 2020-06-28 22:48 IST
ಹಾವೇರಿ, ಜೂ.28: ಮದುವೆ ನಡೆಯಲು ಕೆಲವೇ ಗಂಟೆಗಳಿರುವಾಗ ವಧುವಿನ ಸಹೋದರಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದೂಡಿ, ವಧು ಸೇರಿ 19 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಹಾವೇರಿ ನಗರದ ನಾಗೇಂದ್ರನಮಟ್ಟಿಯಲ್ಲಿ ರವಿವಾರ ಈ ಘಟನೆ ನಡೆದಿದೆ. ವಧುವಿನ ಸಹೋದರಿಗೆ ಸೋಂಕು ಇರುವುದನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ದೃಢಪಡಿಸಿದ್ದಾರೆ.
ಸೋಂಕು ಹರಡಿರುವುದು ಖಚಿತವಾಗುತ್ತಿದ್ದಂತೆ ಜಿಲ್ಲಾಡಳಿತ ಸೋಂಕಿತೆ ವಾಸವಿದ್ದ ಪ್ರದೇಶವನ್ನು ಸೀಲ್‍ಡೌನ್ ಮಾಡಿದೆ. ರವಿವಾರ ನಡೆಯಬೇಕಿದ್ದ ಮದುವೆಯನ್ನು ರದ್ದುಗೊಳಿಸಿದೆ. ವಧು ಸೇರಿ 19ಕ್ಕೂ ಹೆಚ್ಚು ಸಂಬಂಧಿಕರನ್ನು ಸೋಂಕಿತೆಯ ಸಂಪರ್ಕಿತರೆಂದು ಪರಿಗಣಿಸಿ ಕ್ವಾರಂಟೈನ್ ಮಾಡಲಾಗಿದೆ.