ಉಸಿರಾಡಲೂ ಆಗುತ್ತಿಲ್ಲ, ಇಲ್ಲಿದ್ದರೆ ಜೀವಂತ ಶವವಾಗುತ್ತೇನೆ: ಐಸೋಲೇಶನ್ ಕೇಂದ್ರದಲ್ಲಿ ಕಾನ್‍ಸ್ಟೇಬಲ್ ಅಳಲು

Update: 2020-06-29 13:43 GMT
ಸಾಂದರ್ಭಿಕ ಚಿತ್ರ

ಕಲಬುರಗಿ, ಜೂ.29: ಐಸೋಲೇಶನ್ ಕೇಂದ್ರದಲ್ಲಿ ಉಸಿರಾಡಲೂ ತೊಂದರೆಯಾಗುತ್ತಿದ್ದು, ಇನ್ನಷ್ಟು ದಿನ ಇಲ್ಲಿಯೇ ಇದ್ದರೆ ಜೀವಂತ ಶವವಾಗಿ ಹೋಗುತ್ತೇನೆ ಎಂದು ಫರಹತಾಬಾದ್ ಪೊಲೀಸ್ ಠಾಣೆಯ ಕೊರೋನ ವೈರಸ್ ಸೋಂಕಿತ ಕಾನ್‍ಸ್ಟೇಬಲ್ ಒಬ್ಬರು ಹಿರಿಯ ಅಧಿಕಾರಿಗಳೊಂದಿಗೆ ಆಡಿಯೊ ರೆಕಾರ್ಡಿಂಗ್ ಹಾಗೂ ವಿಡಿಯೊ ಮೂಲಕ ಅಳಲು ತೋಡಿಕೊಂಡಿದ್ದಾರೆ.

ಕಲಬುರಗಿ ನಗರದ ಎಲ್ಲ ಪೊಲೀಸರಿಗೆ ಕೊರೋನ ವೈರಸ್ ತಪಾಸಣೆ ಮಾಡಿಸಲಾಗಿತ್ತು. ಅದರಲ್ಲಿ ಕಾನ್‍ಸ್ಟೇಬಲ್‍ವೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಐಸೋಲೇಶನ್ ಕೇಂದ್ರಕ್ಕೆ ಕಳುಹಿಸಲಾಗಿತ್ತು.

"ಈ ಐಸೋಲೇಶನ್ ಕೇಂದ್ರವು ಅವ್ಯಸ್ಥೆಯ ಆಗರವಾಗಿದ್ದು, ಇಲ್ಲಿ ಉಸಿರಾಡಲೂ ತೊಂದರೆಯಾಗಿದೆ. ಬೆಡ್‍ಶೀಟ್, ತಲೆದಿಂಬು, ಕುಡಿಯುವ ನೀರಿನಂತಹ ಯಾವುದೇ ಮೂಲಸೌಕರ್ಯ ಕೂಡ ಇಲ್ಲ ಎಂದು ಕಾನ್‍ಸ್ಟೇಬಲ್ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ್, ಆಂಬ್ಯುಲೆನ್ಸ್ ಚಾಲಕ ಪೊಲೀಸರಿಗಾಗಿ ಕಾಯ್ದಿರಿಸಿರುವ ಐಸೋಲೇಶನ್ ಕೇಂದ್ರಕ್ಕೆ ಕರೆದೊಯ್ಯುವ ಬದಲು ಬೇರೆ ಕೇಂದ್ರಕ್ಕೆ ಕರೆದೊಯ್ದಿದ್ದರಿಂದ ಈ ಅವಾಂತರವಾಗಿದೆ. ನಂತರ ಕಾನ್‍ಸ್ಟೇಬಲ್ ಗಾಬರಿಯಾಗಿ ಸಂದೇಶ ಕಳುಹಿಸಿದ್ದರು. ಒಂದು ಗಂಟೆಯ ಬಳಿಕ ಅವರನ್ನು ಪೊಲೀಸರಿಗಾಗಿ ನಿಗದಿಪಡಿಸಿದ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿ ಕುಡಿಯುವ ನೀರಿನ ಬಾಟಲಿ, ಪ್ಲೇಟ್, ಟವೆಲ್, ಬೆಡ್‍ಶೀಟ್, ಬಿಸಿ ನೀರು, ವೈಫೈ ಕನೆಕ್ಷನ್ ಸೇರಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News