ಶ್ರಮಿಕ್ ರೈಲುಗಳಲ್ಲಿ ರಾಜ್ಯದಿಂದ 3.75 ಲಕ್ಷ ಜನರು ಹೊರ ರಾಜ್ಯಗಳಿಗೆ ವಾಪಸ್

Update: 2020-06-29 16:56 GMT

ಬೆಂಗಳೂರು, ಜೂ.29: ರಾಜ್ಯಾದ್ಯಂತ ಲಾಕ್‍ಡೌನ್ ತೆರವುಗೊಂಡ ಬಳಿಕ ಆರಂಭವಾದ ಶ್ರಮಿಕ್ ರೈಲುಗಳ ಮುಖಾಂತರ ದೇಶದ ವಿವಿಧ ಮೂಲೆಗಳಿಗೆ ಸರಿಸುಮಾರು 3.75 ಲಕ್ಷ ವಲಸೆ ಕಾರ್ಮಿಕರು ಹಿಂದಿರುಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಮೇ 5ರಿಂದ ಜೂ.27ರವರೆಗೂ ಒಟ್ಟಾರೆ 256 ಶ್ರಮಿಕ್ ರೈಲುಗಳಲ್ಲಿ 3.75 ಲಕ್ಷಕ್ಕೂ ಅಧಿಕ ಕಾರ್ಮಿಕರು ವಾಪಸ್ಸು ಮರಳಿದ್ದಾರೆ. ಅದರಲ್ಲಿ ಬಿಹಾರ(79 ರೈಲು: 1,16,313 ಪ್ರಯಾಣಿಕರು), ಉತ್ತರ ಪ್ರದೇಶ( 56 ರೈಲು, 81,067 ಪ್ರಯಾಣಿಕರು), ಪಶ್ಚಿಮ ಬಂಗಾಳ (27 ರೈಲು, 40,395 ಪ್ರಯಾಣಿಕರು) ಹಾಗೂ ಅಸ್ಸಾಂ(23 ರೈಲು, 36,788 ಪ್ರಯಾಣಿಕರು)ಗೆ ಅತಿಹೆಚ್ಚು ಜನರು ಪ್ರಯಾಣಿಸಿದ್ದಾರೆ.

ಬದುಕು ಕಟ್ಟಿಕೊಳ್ಳಲು ದೇಶದ ವಿವಿಧ ಮೂಲೆಗಳಿಂದ ಉದ್ಯೋಗ ಅರಸಿ ಲಕ್ಷಾಂತರ ಜನರು ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದಾರೆ. ವ್ಯಾಸಂಗಕ್ಕಾಗಿಯೂ ಬಂದ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಕೆ ಏನಿಲ್ಲ. ಪಿಜಿ, ರೂಂಗಳು, ಹಾಸ್ಟೆಲ್‍ಗಳಲ್ಲಿ ವಾಸ್ಯವ್ಯ ಹೂಡಿದ್ದ ಇವರೆಲ್ಲ ಲಾಕ್‍ಡೌನ್ ಶುರುವಾಗುತ್ತಿದ್ದಂತೆ ಕಂಗಾಲಾಗಿ ತವರಿಗೆ ಮರಳಲು ಅವಕಾಶ ಕೋರಿದ್ದರು. ಸರಕಾರ ಇವರ ಕೋರಿಕೆಯಂತೆ ಉಚಿತ ಶ್ರಮಿಕ್ ರೈಲುಗಳ ಸೇವೆ ಕಲ್ಪಿಸಿದ್ದು, ಈವರೆಗೆ ಮೂರೂ ಮುಕ್ಕಾಲು ಲಕ್ಷ ಜನರು ಉದ್ಯಾನನಗರಿ ತೊರೆದಿದ್ದಾರೆ.

256 ರೈಲುಗಳ ಮೂಲಕ 3,75,936 ಪ್ರಯಾಣಿಕರು ರಾಜ್ಯವನ್ನು ತೊರೆದಿದ್ದಾರೆ. ಇವರೆಲ್ಲರಿಗೂ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸುವ ಜೊತೆಗೆ ಕುಡಿಯುವ ನೀರು, ಉಪಾಹಾರ, ಭೋಜನದ ವ್ಯವಸ್ಥೆ ಕೂಡ ಭಾರತೀಯ ರೈಲ್ವೆ ಕಲ್ಪಿಸಿದೆ. ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದವರಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಜನರು ತಮ್ಮ ತಮ್ಮ ತವರಿಗೆ ಮರಳಿದ್ದಾರೆ. ಕೊರೋನ ಆತಂಕ ಕಡಿಮೆಯಾದ ನಂತರವೇ ಅವರೆಲ್ಲಾ ವಾಪಸ್ಸಾಗುವ ಮನಸ್ಸು ಮಾಡಲಿದ್ದಾರೆ ಎನ್ನಲಾಗಿದೆ.

ಆರಂಭದಲ್ಲಿ ಕಡಿಮೆ ಸಂಖ್ಯೆಯ ಜನರು ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದರೆ ಅನಂತರ ದಿನಗಳಲ್ಲಿ 15 ಸಾವಿರದಿಂದ ಆರಂಭವಾಗಿ 16, 18, 21 ಸಾವಿರಕ್ಕೂ ಅಧಿಕ ಜನರು ಒಂದೊಂದು ದಿನದಲ್ಲಿಯೇ ಪ್ರಯಾಣ ಬೆಳೆಸಿದ್ದಾರೆ. ಇವರೆಲ್ಲರೂ ಬಹುತೇಕರು ವಲಸೆ ಕಾರ್ಮಿಕರೇ ಎಂದು ಅಂದಾಜಿಸಲಾಗಿದೆ.

ಯಾವ ರಾಜ್ಯಕ್ಕೆ ಎಷ್ಟು ರೈಲುಗಳಲ್ಲಿ ಎಷ್ಟು ಪ್ರಯಾಣಿಕರು ತೆರಳಿದರು ?

ಬಿಹಾರ: 79 ರೈಲು, 1,16,313 ಪ್ರಯಾಣಿಕರು

ಉತ್ತರ ಪ್ರದೇಶ: 56 ರೈಲು, 81,067 ಪ್ರಯಾಣಿಕರು

ಪಶ್ಚಿಮ ಬಂಗಾಳ: 27 ರೈಲು, 40,395 ಪ್ರಯಾಣಿಕರು

ಅಸ್ಸಾಂ: 23 ರೈಲು, 36,788 ಪ್ರಯಾಣಿಕರು

ಜಾರ್ಖಂಡ್: 21 ರೈಲು, 30,962 ಪ್ರಯಾಣಿಕರು

ಒರಿಸ್ಸಾ: 17 ರೈಲು, 26,020 ಪ್ರಯಾಣಿಕರು

ರಾಜಸ್ಥಾನ: 9 ರೈಲು, 12,190 ಪ್ರಯಾಣಿಕರು

ಮಧ್ಯಪ್ರದೇಶ: 5 ರೈಲು, 7,085 ಪ್ರಯಾಣಿಕರು

ತ್ರಿಪುರ: 4 ರೈಲು, 5,704 ಪ್ರಯಾಣಿಕರು

ಉತ್ತರಾಖಂಡ: 3 ರೈಲು, 3,863 ಪ್ರಯಾಣಿಕರು

ಜಮ್ಮು ಮತ್ತು ಕಾಶ್ಮೀರ: 3 ರೈಲು, 2,950 ಪ್ರಯಾಣಿಕರು

ಮಣಿಪುರ: 3 ರೈಲು, 4,940 ಪ್ರಯಾಣಿಕರು

ಛತ್ತೀಸ್‍ಘಡ: 2 ರೈಲು, 2,557 ಪ್ರಯಾಣಿಕರು

ಹಿಮಾಚಲ ಪ್ರದೇಶ: 1 ರೈಲು, 643 ಪ್ರಯಾಣಿಕರು

ಕೇರಳ: 1 ರೈಲು, 1,496 ಪ್ರಯಾಣಿಕರು

ಮಿಜೋರಾಂ: 1 ರೈಲು, 1,456 ಪ್ರಯಾಣಿಕರು

ನಾಗಾಲ್ಯಾಂಡ್: 1 ರೈಲು, 1,507 ಪ್ರಯಾಣಿಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News