ಕೊರೋನದಿಂದ ಮೃತಪಟ್ಟ ಹಲವರ ಮೃತದೇಹಗಳನ್ನು ಒಂದೇ ಗುಂಡಿಗೆ ಎಸೆದ ಸಿಬ್ಬಂದಿ: ಆರೋಪ

Update: 2020-06-30 16:39 GMT

ಬೆಂಗಳೂರು: ಕೊರೋನದಿಂದ ಮೃತಪಟ್ಟವರದ್ದು ಎನ್ನಲಾದ ಹಲವು ಮೃತದೇಹಗಳನ್ನು ಪಿಪಿಇ ಕಿಟ್ ಧರಿಸಿದವರು ಗುಂಡಿಯೊಂದಕ್ಕೆ ಎಸೆಯುತ್ತಿರುವ ಆಘಾತಕಾರಿ ವಿಡಿಯೋವೊಂದು ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋ ಬಳ್ಳಾರಿಯದ್ದು ಎಂದು ಆರೋಪಿಸಲಾಗಿದೆ.

ಆ್ಯಂಬುಲೆನ್ಸ್ ನಿಂದ ಮೃತದೇಹಗಳನ್ನು ತರುವ ಪಿಪಿಇ ಕಿಟ್ ಧರಿಸಿದ ಕೆಲ ವ್ಯಕ್ತಿಗಳು ನಂತರ ದೊಡ್ಡ ಗುಂಡಿಯೊಂದಕ್ಕೆ ಅದನ್ನು ಎಸೆಯುತ್ತಾರೆ. ಈ ಆಘಾತಕಾರಿ ವಿಡಿಯೋದಲ್ಲಿ ಒಂದೇ ಗುಂಡಿಗೆ 3 ಮೃತದೇಹಗಳನ್ನು ಎಸೆಯುವುದು ಕಾಣಿಸುತ್ತದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಘಟನೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಸಾಮಾಜಿಲ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ತಾನು ಗಮನಿಸಿದ್ದು,  ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಡಿಸಿ ನಕುಲ್ ಹೇಳಿದ್ದಾರೆ.

ಕೊರೊನ ಸೋಂಕಿನಿಂದ ಮೃತಪಟ್ಟ ಮೂವರ ಶವಗಳನ್ನು ಪಿಪಿಇ ಕಿಟ್ ಧರಿಸಿದ ಸಿಬ್ಬಂದಿ ವ್ಯಾನ್ ನಿಂದ ಎಳೆದು ತಂದು ಒಂದೇ ಗುಂಡಿಗೆ ಎಸೆಯುವ 1 ನಿಮಿಷ 28 ಸೆಕೆಂಡಿನ ವೀಡಿಯೋ ಜಿಲ್ಲೆಗೆ ಸಂಬಂಧಿಸಿದ್ದು, ಈ ಘಟನೆಗಾಗಿ ಜಿಲ್ಲಾಡಳಿತವು ಮೃತರ ಸಂಬಂಧಿಕರಲ್ಲಿ ಹಾಗೂ ಜಿಲ್ಲೆಯ ಜನರಲ್ಲಿ ಬೇಷರತ್ ಆಗಿ ಕ್ಷಮೆ ಯಾಚಿಸುತ್ತದೆ ಎಂದು ಜಿಲ್ಲಾಧಿಕಾರಿ‌ ಎಸ್.ಎಸ್.ನಕುಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News