ಕಾಫಿನಾಡಿಲ್ಲಿ ಒಂದೇ ದಿನ 10 ಮಂದಿಗೆ ಕೊರೋನ ಪಾಸಿಟಿವ್

Update: 2020-06-30 15:39 GMT

ಚಿಕ್ಕಮಗಳೂರು, ಜೂ.30: ಕಾಫಿನಾಡಿಗೆ ಮಂಗಳವಾರವೂ ಕೊರೋನಾಘಾತವಾಗಿದ್ದು, ಸೋಮವಾರ 17 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದ ಜಿಲ್ಲೆಯಲ್ಲಿ ಮಂಗಳವಾರವೂ ಒಂದೇ ದಿನ 10 ಪ್ರಕರಣಗಳು ವರದಿಯಾಗಿವೆ.

ಈ 10 ಪ್ರಕರಣಗಳ ಪೈಕಿ ತರೀಕೆರೆ ತಾಲೂಕೊಂದರಲ್ಲೇ 7 ಮಂದಿಯಲ್ಲಿ ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದ್ದು, ಮೂಡಿಗೆರೆ ತಾಲೂಕಿನಲ್ಲಿ 1 ಹಾಗೂ ಚಿಕ್ಕಮಗಳೂರು ನಗರದಲ್ಲಿ 2 ಪ್ರಕರಣಗಳು ವರದಿಯಾಗಿವೆ.

ಮೂಡಿಗೆರೆಯಲ್ಲಿ ಪತ್ತೆಯಾಗಿರುವ ಪ್ರಕರಣ 2 ವರ್ಷ ಮಗುವಿನದ್ದಾಗಿದೆ ಎಂದು ತಿಳಿದು ಬಂದಿದೆ. ಸೋಂಕಿತರನ್ನು ಚಿಕ್ಕಮಗಳೂರು ನಗರದ ಕೋವಿಡ್-19 ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಪ್ರದೇಶಗಳಲ್ಲಿ ಕಂಟೈನ್‍ಮೆಂಟ್ ಝೋನ್‍ಗಳನ್ನು ಗುರುತಿಸಿರುವ ಜಿಲ್ಲಾಡಳಿತ ಈ ಪ್ರದೇಶಗಳ ನಿರ್ವಹಣೆಗೆ ತಹಶೀಲ್ದಾರ್ ಗಳನ್ನು ಕಮಾಂಡರ್‍ಗಳನ್ನು ನೇಮಿಸಿದೆ.

ಮಂಗಳವಾರ ಓರ್ವ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ಸದ್ಯ ಜಿಲ್ಲೆಯಲ್ಲಿರುವ ಪಾಸಿಟಿವ್ ಪ್ರಕರಣಗಳ ಸಂಖ್ಯೆ 43ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News