ಬೆಂಗಳೂರು: 18 ಆಸ್ಪತ್ರೆಗಳಿಗೆ ಅಲೆದು ಪ್ರಾಣಬಿಟ್ಟ 52 ವರ್ಷದ ವ್ಯಕ್ತಿ

Update: 2020-06-30 16:15 GMT

ಬೆಂಗಳೂರು, ಜೂ.30: ತೀವ್ರ ಉಸಿರಾಟದ ತೊಂದರೆಯಿಂದ ಬಳುಲುತ್ತಿದ್ದ 52 ವರ್ಷದ ಗಾರ್ಮೆಂಟ್ ಮಾಲಕನೋರ್ವ ರವಿವಾರ ಚಿಕಿತ್ಸೆಗಾಗಿ ಸತತ 36 ಗಂಟೆಗಳ ಕಾಲ ನಗರದ 18 ಆಸ್ಪತ್ರೆಗಳಿಗೆ ತಿರುಗಾಡಿ ಕೊನೆಗೂ ಯಾವುದೇ ಆಸ್ಪತ್ರೆಯಲ್ಲಿ ದಾಖಲಾಗದೇ ಸಾವನ್ನಪ್ಪಿದ್ದಾರೆ ಎನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರವಿವಾರ ತೀವ್ರ ಉಸಿರಾಟದಿಂದ ಬಳಲುತ್ತಿದ್ದ ವ್ಯಕ್ತಿ ನಗರದ 18 ಆಸ್ಪತ್ರೆಗಳಿಗೆ ತೆರಳಿ, ನನಗೆ ಉಸಿರು ಕಟ್ಟಿದಂತಾಗುತ್ತಿದೆ ನನ್ನನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ಕೊಡಿ ಎಂದು ಬೇಡಿಕೊಂಡರೂ ನಗರದ ಪ್ರಖ್ಯಾತ ಆಸ್ಪತ್ರೆಗಳು ವ್ಯಕ್ತಿಯನ್ನು ದಾಖಲಿಸಿಕೊಳ್ಳದೇ ವಾಪಾಸು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. 

36 ಗಂಟೆಗಳಲ್ಲಿ 18 ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಬೇಡಿಕೊಂಡಿದ್ದಾರೆ. ಎಲ್ಲ ಆಸ್ಪತ್ರೆಗಳು ನಮ್ಮಲ್ಲಿ ಬೆಡ್ ಖಾಲಿ ಇಲ್ಲ ಎಂದು ಸಬೂಬು ಹೇಳಿವೆ ಎನ್ನಲಾಗಿದೆ. ಕೊನೆಯಲ್ಲಿ ರಾಜಾಜಿನಗರದ ಆಸ್ಪತ್ರೆಯಲ್ಲಿ ಕೊರೋನ ತಪಾಸಣೆ ಮಾಡಿ ನಂತರ ಬೋರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗುವ ಮೊದಲೇ ವ್ಯಕ್ತಿ ಮೃತಪಟ್ಟಿದ್ದಾರೆ. ಇವರಿಗೆ ಕೊರೋನ ಸೋಂಕು ಇದೆಯೋ ಇಲ್ಲವೋ ಎಂಬುದು ಇನ್ನೂ ತಿಳಿದು ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News