11 ವಿಧಾನಪರಿಷತ್ ಸದಸ್ಯರು ನಿವೃತ್ತಿ

Update: 2020-06-30 18:24 GMT

ಬೆಂಗಳೂರು, ಜೂ. 30: ರಾಜ್ಯ ವಿಧಾನ ಪರಿಷತ್ತಿನಿಂದ 11 ಮಂದಿ ಸದಸ್ಯರು ಮಂಗಳವಾರ ನಿವೃತ್ತಿಯಾಗಿದ್ದಾರೆ.

ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಎಚ್.ಎಂ. ರೇವಣ್ಣ, ಟಿ.ಎ. ಶರವಣ, ಸಿ. ಮಲ್ಲಿಕಾರ್ಜುನ, ನಜೀರ್ ಅಹಮದ್, ಎಂ.ಸಿ. ವೇಣುಗೋಪಾಲ್, ಜಯಮ್ಮ, ಎಂ.ಎಸ್. ಭೋಸರಾಜುರವರ ಅವಧಿ ಮಂಗಳವಾರಕ್ಕೆ ಅಂತ್ಯಗೊಂಡಿದೆ. ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಆರ್. ಚೌಡರೆಡ್ಡಿ, ಎಸ್.ವಿ. ಸಂಕನೂರು, ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪುಟ್ಟಣ್ಣ ಹಾಗೂ ಶರಣಪ್ಪ ಮಟ್ಟೂರ ಅವರುಗಳ ಅವಧಿಯು ಮುಗಿದಿದೆ.

ರಾಜ್ಯ ವಿಧಾನಸಭೆಯಿಂದ ಈಗಾಗಲೇ 7 ಸ್ಥಾನಕ್ಕೆ ಆಡಳಿತಾರೂಢ ಬಿಜೆಪಿಯ ಎಂಟಿಬಿ ನಾಗರಾಜು, ಆರ್. ಶಂಕರ್, ಪ್ರತಾಪ್‍ಸಿಂಹ ನಾಯಕ್ ಹಾಗೂ ಸುನಿಲ್ ವಲ್ಯಾಪುರೆ, ಕಾಂಗ್ರೆಸ್‍ನಿಂದ ಬಿ.ಕೆ. ಹರಿಪ್ರಸಾದ್. ನಝೀರ್ ಅಹಮದ್ ಹಾಗೂ ಜೆಡಿಎಸ್‍ನಿಂದ ಗೋವಿಂದರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯನ್ನು ಕೊರೋನ ಸೋಂಕು ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ವಿಧಾನ ಪರಿಷತ್ತಿಗೆ ನಾಮಕರಣಗೊಂಡಿದ್ದ ಐವರು ಸದಸ್ಯರು ಕಳೆದ ಜೂ. 23 ರಂದೇ ನಿವೃತ್ತಿಯಾಗಿದ್ದರು. ಹೀಗಾಗಿ ಐವರು ನಾಮಕರಣ ಸದಸ್ಯರುಗಳ ಸ್ಥಾನಗಳು ಖಾಲಿ ಉಳಿದಿವೆ. ಈ ಐದು ಸ್ಥಾನಗಳಿಗೆ ಸರಕಾರ ವಿವಿಧ ಕ್ಷೇತ್ರಗಳ ಗಣ್ಯರನ್ನು ನಾಮಕರಣ ಮಾಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News