ಕರ್ನಾಟಕ ರಾಜ್ಯ ಮುಕ್ತ ಮುಕ್ತವಿಶ್ವವಿದ್ಯಾಲಯದಿಂದ ಜು.3ರಿಂದ ಕೌಶಲ್ಯಾಭಿವೃದ್ಧಿ ಕುರಿತು ಆನ್‍ಲೈನ್ ತರಗತಿ

Update: 2020-06-30 18:33 GMT

ಬೆಂಗಳೂರು, ಜೂ.30: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2019-20ನೇ ಸಾಲಿನಲ್ಲಿ ಪ್ರವೇಶ ಪಡೆದ ಪ್ರಥಮ ವರ್ಷದ ಸ್ನಾತಕ, ಸ್ನಾತಕೋತ್ತರ ಹಾಗೂ 2018-19ನೇ ಸಾಲಿನ ದ್ವಿತೀಯ ವರ್ಷದ ಸ್ನಾತಕ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ವಿಷಯಗಳ ತರಗತಿಗಳನ್ನು ಜು.3ರಿಂದ ಜು.14ರವರೆಗೆ ಆನ್‍ಲೈನ್ ನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ಕೌಶಲ್ಯಾಭಿವೃದ್ದಿಯ ತರಬೇತಿಯ ಪಠ್ಯವಿಷಯ ಮತ್ತು ಆನ್‍ಲೈನ್ ಲಿಂಕನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವೆಬ್‍ಸೈಟ್ www.ksoumysuru.ac.in ನಲ್ಲಿ ಮತ್ತು KSOU STUDENT APP ನಲ್ಲಿ ಪ್ರಕಟಿಸಲಾಗಿದೆ. ಇದರ ಭಾಗವಹಿಸುವ ವಿದ್ಯಾರ್ಥಿಗಳಿಗೆ ಇ-ಡಿಜಿಟಲ್ ಪ್ರಮಾಣ ಪತ್ರವನ್ನು ಆನ್‍ಲೈನ್ ಮೂಲಕ ವಿತರಿಸಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಯೋಜನಾಧಿಕಾರಿ ಡಾ.ಲೋಕೇಶ್ ದೂ.9611434810, 080-23448811ಕ್ಕೆ ಸಂಪರ್ಕಿಸಲು ಕೋರಲಾಗಿದೆ, 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News