ಕೋವಿಡ್-19 ರೋಗಿಗಳಿಗೆ ಆಹಾರ ಒದಗಿಸಲು ಸುತ್ತೋಲೆ ಹೊರಡಿಸಿದ ಸರಕಾರ

Update: 2020-07-01 15:49 GMT

ಬೆಂಗಳೂರು, ಜು.1: ರಾಜ್ಯದ ಜಿಲ್ಲಾ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್-19 ಸೋಂಕಿತ ರೋಗಿಗಳಿಗೆ ತಜ್ಞರ ಸಲಹೆಯಂತೆ ಸಿದ್ಧಪಡಿಸಿರುವ ಪಥ್ಯಾಹಾರದ ಆಹಾರವನ್ನು ಕಾಲಕಾಲಕ್ಕೆ ತಪ್ಪದೆ ಒದಗಿಸುವಂತೆ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ. 

ಅಲ್ಲದೆ, ಪಥ್ಯಾಹಾರವನ್ನು ಕೋವಿಡ್ ಕೇರ್ ಸೆಂಟರ್ಸ್. ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್ಸ್, ಡೆಡಿಕೇಟೆಡ್ ಕೋವಿಡ್ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್-19 ಸೋಂಕಿತ ರೋಗಿಗಳಿಗೂ ಆಹಾರವನ್ನು ಒದಗಿಸಲು ಸೂಚಿಸಲಾಗಿದೆ.  

ಸೋಮವಾರ: ಬೆಳಗ್ಗೆ 7ಕ್ಕೆ ರವೆ ಇಡ್ಲಿ, ಬೆಳಗ್ಗೆ 10ಕ್ಕೆ ಕಲ್ಲಂಗಡಿ ಹಣ್ಣು/ರಾಗಿ ಗಂಜಿ. ಮಂಗಳವಾರ: ಬೆಳಗ್ಗೆ 7ಕ್ಕೆ ಪೊಂಗಲ್, ಬೆಳಗ್ಗೆ 10ಕ್ಕೆ ಪಪ್ಪಾಯ ಹಣ್ಣು/ಪಾಲಾಕ್ ಸೂಪ್. ಬುಧವಾರ: ಬೆಳಗ್ಗೆ 7ಕ್ಕೆ ಸೆಟ್ ದೋಸೆ, ಬೆಳಗ್ಗೆ 10ಕ್ಕೆ ಕರಬೂಜ ಹಣ್ಣು/ರವೆ ಗಂಜಿ. ಗುರುವಾರ: ಬೆಳಗ್ಗೆ 7ಕ್ಕೆ ಅಕ್ಕಿ ಇಡ್ಲಿ, ಬೆಳಗ್ಗೆ 10ಕ್ಕೆ ಕಲ್ಲಂಗಡಿ ಹಣ್ಣು/ಕ್ಯಾರೆಟ್ ಸೂಪ್.  
ಶುಕ್ರವಾರ: ಬೆಳಗ್ಗೆ 7ಕ್ಕೆ ಬಿಸಿಬೇಳೆ ಬಾತ್, ಬೆಳಗ್ಗೆ 10ಕ್ಕೆ ಪಪ್ಪಾಯ ಹಣ್ಣು/ರಾಗಿ ಗಂಜಿ. ಶನಿವಾರ: ಬೆಳಗ್ಗೆ 7ಕ್ಕೆ ಚೌ-ಚೌ ಬಾತ್, ಬೆಳಗ್ಗೆ 10ಕ್ಕೆ ಕರಬೂಜ ಹಣ್ಣು/ಟೊಮೋಟೊ ಸೂಪ್, ರವಿವಾರ: ಬೆಳಗ್ಗೆ 7ಕ್ಕೆ ಸೆಟ್ ದೋಸೆ, ಬೆಳಗ್ಗೆ 10ಕ್ಕೆ ಪಪ್ಪಾಯ ಹಣ್ಣು/ರವೆ ಗಂಜಿಯನ್ನು ಕೊರೋನ ರೋಗಿಗಳಿಗೆ ನೀಡಲಾಗುತ್ತದೆ. 

ಅಲ್ಲದೆ, ವಾರದ ಏಳು ದಿನವೂ ಮಧ್ಯಾಹ್ನ 1ಕ್ಕೆ ರೊಟ್ಟಿ/ಚಪಾತಿ-2+ಪಲ್ಯ+ಅನ್ನ+ಬೇಳೆಸಾರು+ಮೊಸರು/ಮೊಟ್ಟೆ, ಸಾಯಂಕಾಲ 5.30ಕ್ಕೆ ಏಲಕ್ಕಿ ಬಾಳೆಹಣ್ಣು+ಮಾರಿ ಬಿಸ್ಕೇಟ್-3/ಪ್ರೊಟೀನ್ ಬಿಸ್ಕೇಟ್-2/ಫ್ರಶ್ ಡೇಟ್ಸ್-2+ಮ್ಯಾಂಗೋ ಬಾರ್(ವಿಟಮಿನ್-ಸಿ ಯುಕ್ತ), ರಾತ್ರಿ ಊಟ 7ಕ್ಕೆ ರೊಟ್ಟಿ/ಚಪಾತಿ-2+ಪಲ್ಯ+ಅನ್ನ+ಬೇಳೆಸಾರು+ಮೊಸರು, ರಾತ್ರಿ 9ಕ್ಕೆ ಪ್ಲೇವರ್ಡ್ ಮಿಲ್ಕ್ ಅನ್ನು ಕೊರೋನ ರೋಗಿಗಳಿಗೆ ವಿತರಿಸಲಾಗುತ್ತದೆ.

ಪ್ರತಿ ವ್ಯಕ್ತಿಗೆ ಮೇಲಿನ ಆಹಾರದ ವೆಚ್ಚಗಳಿಗಾಗಿ 250 ರೂ.ಗೆ ಮೀರದಂತೆ ಕ್ರಮವಹಿಸಿ, ಸದರಿ ಮೊತ್ತವನ್ನು ಆಸ್ಪತ್ರೆಯ ಎಆರ್‍ಎಸ್ ನಿಧಿಯಿಂದ/ಜಿಲ್ಲಾಧಿಕಾರಿಗಳ ಅಧೀನದಲ್ಲಿನ ವಿಪತ್ತು ಪರಿಹಾರ ನಿಧಿಯಿಂದ ಪಡೆದುಕೊಳ್ಳಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಸುತ್ತೋಲೆ ಹೊರಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News