ಬೆಂಗಳೂರು: ಹೇರ್ ಸೆಲೂನ್ ಮಾಲಕ ಕೊರೋನ ಸೋಂಕಿಗೆ ಬಲಿ

Update: 2020-07-01 17:52 GMT

ಬೆಂಗಳೂರು, ಜು.1: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕೊರೋನ ಮಹಾಮಾರಿ ಅಟ್ಟಹಾಸ ಅಧಿಕವಾಗುತ್ತಿದ್ದು, ಇದೀಗ ಹೇರ್ ಸಲೂನ್ ಮಾಲಕರೊಬ್ಬರು ಕೊರೋನ ಸೋಂಕಿನಿಂದ ಮೃತಪಟ್ಟಿರುವ ಘಟನೆ ನಗರದಲ್ಲಿಂದು ನಡೆದಿದೆ.

ರಾಜಧಾನಿಯ ಶಿವನಗರ ವಾರ್ಡ್‍ನ 45 ವರ್ಷದ ಸೋಂಕಿತ ಜ್ವರದಿಂದ ಬಳಲುತ್ತಿದ್ದರು. ಕಳೆದ 1 ವಾರದ ಹಿಂದೆ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾರೆ. ಹಲವರಿಗೆ ಹೇರ್ ಕಟ್ಟಿಂಗ್ ಮಾಡಿದ್ದು, ಇದೀಗ ಅಂಗಡಿಗೆ ಹೋಗಿದ್ದವರಲ್ಲಿ ಆತಂಕ ಹೆಚ್ಚಿದೆ. 

ಶಿವಾಜಿನಗರದ ಎಇಇಗೆ ತಗುಲಿದ ಸೋಂಕು: ಬಿಬಿಎಂಪಿ ಸಿಬ್ಬಂದಿಗೆ ಬೆನ್ನು ಹತ್ತಿರುವ ಕೊರೋನ ಮಹಾಮಾರಿ ಈಗ ಎಇಇಗೂ ತಗುಲಿದೆ. ಘನತ್ಯಾಜ್ಯ ನಿರ್ವಹಣೆ ವಿಭಾಗದ ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಶಿವಾಜಿನಗರದ ಘನತ್ಯಾಜ್ಯ ನಿರ್ವಹಣೆ ಎಇಇಗೆ, ವಿಶೇಷ ಆಯುಕ್ತ ರಂದೀಪ್ ಪಿಎಗೆ ಸೋಂಕು ತಗುಲಿದ್ದು, ಬಿಬಿಎಂಪಿ ಅಧಿಕಾರಿಗಳಿಗೂ ನಡುಕ ಶುರುವಾಗಿದೆ. 
ಬಿಬಿಎಎಂಪಿಯಲ್ಲಿನ ಐಎಎಸ್ ಅಧಿಕಾರಿಯ ಸಹಾಯಕನಿಗೆ ಸೋಂಕು ತಗುಲಿದ ಪರಿಣಾಮ ಆ ಅಧಿಕಾರಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಸೋಂಕು ತಗುಲಿದ್ದು, ಪಾಲಿಕೆಯ ಮುಖ್ಯಆರೋಗ್ಯಾಧಿಕಾರಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News