ಉತ್ತರ ಕನ್ನಡ ಜಿಲ್ಲೆಯಲ್ಲಿ ತ್ರಿಶಕತ ಬಾರಿಸಿದ ಕೊರೋನ

Update: 2020-07-04 18:01 GMT

ಕಾರವಾರ,ಜು.4: ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ 35 ಕೊರೋನ ಸೋಂಕಿನ ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ ತ್ರಿಶತಕ ದಾಟಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 333 ಪ್ರಕರಣಗಳು ದಾಖಲಾಗಿದ್ದು, ಇಲ್ಲಿನ ಕೋವಿಡ್ ವಾರ್ಡ್ ಭರ್ತಿಯಾಗುವ ಲಕ್ಷಣವಿದೆ.

ಶನಿವಾರ ಪತ್ತೆಯಾದ ಪ್ರಕರಣಗಳ ಪೈಕಿ ಭಟ್ಕಳ 16, ಹೊನ್ನಾವರ 5, ಯಲ್ಲಾಪುರ 2, ಶಿರಸಿ 6, ಅಂಕೋಲಾ 6 ಸೋಂಕಿತರು ಪತ್ತೆಯಾಗಿದ್ದು ದಿನೆ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೂ ಕಾರಣವಾಗಿದೆ.

ಭಟ್ಕಳದಲ್ಲಿ ಪತ್ತೆಯಾದ ಸೋಂಕಿತರ ಪೈಕಿ ಹೆಚ್ಚಿನವರು ಅನ್ಯ ರಾಜ್ಯ ಹಾಗೂ ಮೂವರು ದುಬೈನಿಂದ ಬಂದವರಾಗಿದ್ದು ಭಟ್ಕಳದಲ್ಲಿ ಕ್ವಾರಂಟೈನಲ್ಲಿ ಇದ್ದರು. ಈ ಪೈಕಿ 33 ವರ್ಷದ ಪುರುಷ, 22 ವರ್ಷದ ಯುವತಿ, 42 ವರ್ಷದ ಮಹಿಳೆಯಲ್ಲಿ ಸೋಂಕಿ ಕಾಣಿಸಿಕೊಂಡಿದೆ.

ವಿಜಯವಾಡದಿಂದ ವಾಸಪ್ಸಾದ ಒಂದೇ ಕುಟುಂಬದ ಮಂದಿಯಲ್ಲಿ 8 ವರ್ಷದ ಬಾಲಕಿ, 2ರ ಹೆಣ್ಣುಮಗು, 28 ವರ್ಷದ ಪುರುಷ, 15 ವರ್ಷದ ಬಾಲಕ, 13 ವರ್ಷದ ಬಾಲಕಿ, 25ರ ಯುವತಿ, 4ರ ಗಂಡು ಮಗು, 2 ವರ್ಷದ ಹೆಣ್ಣು ಮಗು, ಮಹಾರಾಷ್ಟ್ರದಿಂದ ಬಂದ 47 ವರ್ಷದ ಪುರುಷ, ಉತ್ತರ ಪ್ರದೇಶದಿಂದ ಬಂದ 18 ವರ್ಷದ ಯುವಕ, 22 ವರ್ಷದ ಯುವಕ, 35 ವರ್ಷದ ಪುರುಷ ಮತ್ತು ವಿಜಯವಾಡದಿಂದ ಬಂದ 36 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ .

ಹೊನ್ನಾವರದಲ್ಲಿ ಐದು ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ಕುಟುಂಬದ 28 ವರ್ಷದ ಮಹಿಳೆ, 7 ವರ್ಷದ ಮಗು, 5 ವರ್ಷದ ಮಗು , ಮಹಾರಾಷ್ಟ್ರದಿಂದ ಹೊನ್ನಾವರಕ್ಕೆ ಬಂದ 51 ವರ್ಷದ ಮಹಿಳೆ, 21 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ.

ಯಲ್ಲಾಪುರದಲ್ಲಿ ಸೋಂಕಿನ ಲಕ್ಷಣ ಹೊಂದಿದ 16 ವರ್ಷದ ಬಾಲಕಿ, 25ರ ವ್ಯಕ್ತಿ ಸೋಂಕಿತನ ಪ್ರಾಥಮಿಕ ಸಂಪರ್ಕದಿಂದ ಬಂದ 25 ವರ್ಷದ ಯುವಕನಿಗೆ ಪಾಸಿಟಿವ್ ಬಂದಿದೆ.

ಶಿರಸಿಯಲ್ಲಿ ಸೊಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ 35 ವರ್ಷದ ಪುರುಷ, ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಖಾಸಗಿ ಆಸ್ಪತ್ರೆಯ 47 ವರ್ಷದ ನರ್ಸ್ , ಸೋಂಕಿತ ಬೈಕ್ ಕಳ್ಳತನ ಆರೋಪಿಯ ಸಂಪರ್ಕ ಹೊಂದಿದ ಉಪ ಕಾರಾಗೃಹದ 26 ವರ್ಷದ ಪುರುಷ, 30 ವರ್ಷದ ಪುರುಷ, 20 ವರ್ಷದ ಯುವಕ, ಸೋಂಕಿತನ ಸಂಪರ್ಕವಿದ್ದ ಖಾಸಗಿ ಆಸ್ಪತ್ರೆಯ 51 ವರ್ಷದ ಪುರುಷ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅಂಕೋಲದಲ್ಲಿ 6 ಕೇಸ್ ದೃಢಪಟ್ಟಿದ್ದು , ಬಡಗೇರಿಯ 7 ವರ್ಷದ ಮಗು, ಹಳವಳ್ಳಿ ರಾಮನಗುಳಿಯ 91 ವರ್ಷದ ವೃದ್ದ, ಹುಲಿದೇವರವಾಡ ಗ್ರಾಮದ 21 ವರ್ಷದ ಯುವಕ, ಅಂಕೋಲದ ಕಂಟೈನ್ಮೆಂಟ್ ಝೋನ್ ನಲ್ಲಿ ಕರ್ತವ್ಯ ನಿರ್ವಹಿಸಿದ 26 ವರ್ಷದ ಬೀಟ್ ಕಾನ್‌ಸ್ಟೆಬಲ್‌, ಮಂಗಳೂರಿನಿಂದ ಬಂದ ಕೋಟೆವಾಡದ 22 ವರ್ಷದ ಯುವಕ , ಸೊಂಕಿನ ಲಕ್ಷಣ ಹೊಂದಿದ ಕೊಟೆವಾಡದ 20 ವರ್ಷದ ಯುವಕನಿಗೆ ಪಾಸಿಟಿವ್ ಬಂದಿದೆ. ಇದರಿಂದ ಜಿಲ್ಲೆಯಲ್ಲಿ ಸದ್ಯ ಆತಂಕದ ಲಕ್ಷಣವಿದೆ.

ಜಿಲ್ಲೆಯ ಆಯಾ ಭಾಗಲದಲ್ಲಿ ಸೀಲ್ ಡೌನ್ ಮಾಡಿದ್ದರೂ ಸಹ ಜನರು ಯಾವುದೇ ಭೀತಿ ಇಲ್ಲದೆ ಜನ ವಸತಿ ಪ್ರದೇಶಕ್ಕೆ ಬರುತ್ತಿದ್ದಾರೆ. ಇದರಿಂದ ಇತರರಲ್ಲಿ ಆತಂದ ಛಾಯೆ ಮೂಡಿದೆ. ಸೀಲ್ ಡೌನ್ ಪ್ರಕ್ರಿಯೆ ಇನ್ನಷ್ಟ ಕಟ್ಟುನಿಟ್ಟಾಗಿ ನಡೆಯಬೇಕು ಎನ್ನುವುದು ಜನರ ಅಭಿಪ್ರಾಯವಾಗಿವೆ.

ಜಿಲ್ಲೆಯಲ್ಲಿ ಪ್ರಸ್ತುತ 333 ಪ್ರಕರಣಗಳು ಈವರೆಗೆ ದಾಖಲಾಗಿದ್ದು ಒಟ್ಟು 151 ಸೋಂಕಿತರು ಗುಣಮುಖರಾಗಿದ್ದಾರೆ. ಇದರಲ್ಲಿ ಯಲ್ಲಾಪುರದ ಓರ್ವ ಮಹಿಳೆ ಮೃತಪಟ್ಟಿದ್ದು ಉಳಿದವರು ಕೋವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News