ಅಂಧಕಾರದಿಂದ ಬೆಳಕಿನ ಕಡೆಗೆ ನಡೆಸುವವನೇ ಗುರು: ಸಿಎಂ ಯಡಿಯೂರಪ್ಪ

Update: 2020-07-05 12:39 GMT

ಬೆಂಗಳೂರು, ಜು. 5: `ಗುರು ಪರಂಪರೆಯನ್ನು ಗೌರವಿಸುವ ನಮ್ಮ ಸಂಸ್ಕೃತಿಯಂತೆ, ಗುರುವಿನ ಸ್ಥಾನದಲ್ಲಿರುವ ಎಲ್ಲರಿಗೂ ಗುರು ಪೂರ್ಣಿಮೆಯ ಸಂದರ್ಭದಲ್ಲಿ ವಂದಿಸೋಣ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಶುಭ ಕೋರಿದ್ದಾರೆ.

ರವಿವಾರ ಟ್ವೀಟ್ ಮಾಡಿರುವ ಅವರು, "ಆಜ್ಞಾನದಿಂದ ಸುಜ್ಞಾನದ ಕಡೆಗೆ, ಅಂಧಕಾರದಿಂದ ಬೆಳಕಿನ ಕಡೆಗೆ ನಡೆಸುವವನೆ ಗುರು. ಹಾಗಾಗಿಯೇ ಪುರಂದರದಾಸರು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದಿದ್ದಾರೆ. ವೇದವ್ಯಾಸರು ಜಯಂತಿಯೂ ಆಗಿರುವ `ಗುರು ಪೂರ್ಣಿಮೆ'ಯ ಈ ಸಂದರ್ಭದಲ್ಲಿ ಗುರುವಿನ ಕರುಣೆ, ಪ್ರೀತಿ-ವಾತ್ಸಲ್ಯಗಳು ಸದಾ ನಮ್ಮೆಲ್ಲರ ಮೇಲಿರಲಿ' ಎಂದು ಹೇಳಿದ್ದಾರೆ.

ಅನಂತ ಪ್ರಣಾಮಗಳು: `ಅಜ್ಞಾನವೆಂಬ ಕತ್ತಲಿನಿಂದ ಜ್ಞಾನದ ಬೆಳಕಿನತ್ತ ಕರೆದೊಯ್ಯುವ ಜ್ಯೋತಿಯೇ ಗುರು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸವಾಣಿಯಂತೆ ನಮ್ಮನ್ನು ತಿದ್ದಿ, ಸ್ಫೂರ್ತಿ ತುಂಬಿ, ನಮ್ಮೊಳಗಿರುವ ಪ್ರತಿಭೆಯನ್ನು ಬಡಿದೆಬ್ಬಿಸಿ, ಸಜ್ಜನ ಸಮಾಜ ರೂಪಿಸುವ ಗುರುಗಳಿಗೆ ಗುರುಪೂರ್ಣಿಮೆ ಅನಂತ ಪ್ರಣಾಮಗಳು' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಪವಿತ್ರ ದಿನ: ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವ ಗುರುವಿಗೆ ನಮಿಸುವ ಪವಿತ್ರ ದಿನ. ವ್ಯಾಸ ಮಹರ್ಷಿಗಳ ಜಂಯತಿಯನ್ನು ಗುರುಪೂರ್ಣಿಮೆಯಾಗಿ ಆಚರಿಸುವ ಆಷಾಡ ಮಾಸದ ಪೌರ್ಣಮಿಯ ಈ ಶುಭ ಸಂದರ್ಭದಲ್ಲಿ ಗುರುವಿನ ಸ್ಥಾನದಲ್ಲಿರುವ ಎಲ್ಲರಿಗೂ ವಂದಿಸೋಣ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮೂಲಕ ತಿಳಿಸಿದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News