ತುಮಕೂರು ಜಿಲ್ಲೆಯಲ್ಲಿ ಇಂದು 31 ಮಂದಿಗೆ ಕೋರೋನ ಸೋಂಕು ದೃಢ

Update: 2020-07-05 15:03 GMT

ತುಮಕೂರು, ಜು.5: ಜಿಲ್ಲೆಯಲ್ಲಿ ಇಂದು ಹೊಸದಾಗಿ 31 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಇದರಿಂದಾಗಿ ರೋಗಿಗಳ ಸಂಖ್ಯೆ 250 ಗಡಿ ದಾಟಿದೆ.

ಇಂದಿನ ಪ್ರಕರಣಗಳಲ್ಲಿ ತುಮಕೂರು ನಗರದಲ್ಲಿಯೇ ಅತಿ ಹೆಚ್ಚು ಎಂದರೆ 12 ಪ್ರಕರಣಗಳು ವರದಿಯಾಗಿದ್ದು, ಪಾವಗಡ, ಕುಣಿಗಲ್‍ನಲ್ಲಿ ತಲಾ ಐದು, ಗುಬ್ಬಿಯಲ್ಲಿ 4, ಮಧುಗಿರಿ 3 ಹಾಗೂ ಚಿ.ನ.ಹಳ್ಳಿಯಲ್ಲಿ 1 ಪ್ರಕರಣ ದಾಖಲಾಗಿದ್ದು, ತುಮಕೂರು ನಗರದಲ್ಲಿ ಇದುವರೆಗೂ 66 ಪ್ರಕರಣಗಳು ದಾಖಲಾದಂತಾಗಿದೆ. 252 ಜನರಲ್ಲಿ 61 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 183 ಸಕ್ರಿಯ ಪ್ರಕರಣಗಳಿವೆ. 566 ಜನರ ಮೇಲೆ ನಿಗಾ ಇಡಲಾಗಿದೆ.

ಜಿಲ್ಲೆಯಲ್ಲಿ ಇದುವೆರೆಗೂ 20,512 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದ್ದು, 16879 ಜನರ ವರದಿ ನೆಗೆಟಿವ್ ಬಂದಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ನಗರಕ್ಕಿಂತಲೂ ಗ್ರಾಮೀಣ ಭಾಗದಲ್ಲಿ ಹೆಚ್ಚು ಸೋಂಕಿತರು ಇರುವುದು ಕಂಡು ಬಂದಿದೆ. ಲಾಕ್‍ಡೌನ್‍ನಿಂದ ಹೊರರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದವರು ಮತ್ತು ಬೆಂಗಳೂರಿನಂತಹ ನಗರಗಳಿಂದ ವಾಪಸ್ಸಾದ ವಲಸೆ ಕಾರ್ಮಿಕರಿಂದ ಹಳ್ಳಿಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News