ಲಾಕ್‍ಡೌನ್: 6 ಕೀ.ಮೀ ನಡೆದು ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‍ಸ್ಟೆಬಲ್‍ಗೆ ಊಟ ತಲುಪಿಸಿದ ಪತ್ನಿ

Update: 2020-07-05 16:15 GMT
ಸಾಂದರ್ಭಿಕ ಚಿತ್ರ

ಬೆಳಗಾವಿ, ಜು.5: ರಾಜ್ಯ ಸರಕಾರ ಪ್ರತಿ ರವಿವಾರ ಲಾಕ್‍ಡೌನ್ ಜಾರಿಗೆ ಆದೇಶಿಸಿದ ಬೆನ್ನಲ್ಲೇ ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗೆ ಅವಕಾಶ ಮಾಡಿಕೊಟ್ಟಿದ್ದರೂ ಎಷ್ಟೋ ಹೋಟೆಲ್‍ಗಳೂ ತೆರೆಯದೆ ಬಂದ್ ಆಗಿದ್ದವು. ಇದನ್ನು ಅರಿತ ಪೊಲೀಸರೊಬ್ಬರ ಪತ್ನಿ 6 ಕೀ.ಮೀ ನಡೆದುಕೊಂಡು ಬಂದು ಕರ್ತವ್ಯದಲ್ಲಿದ್ದ ಪತಿಗೆ ಊಟದ ಬಾಕ್ಸ್ ಅನ್ನು ತಲುಪಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಮುಖ್ಯ ಕಾನ್‍ಸ್ಟೆಬಲ್ ಆಗಿ ಅಲಿಖಾನ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಎನ್‍ಡಿ ಕೂಟ ವೃತ್ತದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ತಮ್ಮ ಪತ್ನಿ ನಡೆದುಕೊಂಡು ಬಂದು ಊಟದ ಬಾಕ್ಸ್ ಅನ್ನು ತಲುಪಿಸಿದ್ದಾರೆ.

ಎಪಿಎಂಸಿ ಯಾರ್ಡ್ ನಲ್ಲಿ ಇರುವ ಮನೆಯಿಂದ ಪತ್ನಿ ನೂರ್ ಜಹಾನ್ ಅಲಿಖಾನ್ ಪತಿಗಾಗಿ ಊಟ ತಂದು ಕೊಟ್ಟಿದ್ದಾರೆ. ಪತ್ನಿಯು ತನಗಾಗಿ 6 ಕೀ.ಮೀ ನಡೆದುಕೊಂಡು ಬಂದು ಊಟ ನೀಡಿರುವುದು ಪೊಲೀಸ್ ಕಾನ್‍ಸ್ಟೆಬಲ್ ಅಲಿಖಾನ್ ಸಂತಸಕ್ಕೆ ಕಾರಣವಾಗಿದೆ. ಇದು ಲಾಕ್‍ಡೌನ್ ಸಂದರ್ಭದಲ್ಲಿ ಕೆಲಸ ಮಾಡಲು ಮತ್ತಷ್ಟು ಉತ್ಸಾಹ ಹೆಚ್ಚಿಸಿದಂತೆ ಆಗಿದೆ ಎಂದು ಅಲಿಖಾನ್ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News