ಕೋವಿಡ್-19: ಮಾಹಿತಿ ಸಂಗ್ರಹಿಸದ 110 ಔಷಧ ಅಂಗಡಿಗಳ ಪರವಾನಗಿ ರದ್ದು

Update: 2020-07-06 18:14 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.6: ಕೋವಿಡ್-19 ಸಂಬಂಧ ರೋಗ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರ ಔಷಧ ಖರೀದಿದಾರರ ವಿವರವನ್ನು ಫಾರ್ಮ ಪೋರ್ಟ್ ನಲ್ಲಿ ಭರ್ತಿ ಮಾಡದ ರಾಜ್ಯ ವ್ಯಾಪ್ತಿಯ 110 ಔಷಧ ಅಂಗಡಿಗಳ ಪರವಾನಗಿ ರದ್ದುಗೊಳಿಸಲಾಗಿದೆ.

ಕಲಬುರಗಿ 70, ಬೆಂಗಳೂರು 3, ಬೀದರ್ 4, ಬಿಜಾಪುರ 15, ಮೈಸೂರು 4, ರಾಯಚೂರು 9 ಹಾಗೂ ಬಾಗಲಕೋಟೆ 5 ಔಷಧ ಅಂಗಡಿಗಳ ಪರವಾನಗಿ ರದ್ದುಗೊಳಿಸಿ ಆದೇಶಲಾಗಿದೆ ಎಂದು ಅಪರ ಔಷಧ ನಿಯಂತ್ರಕ ಅಮರೇಶ ತುಂಬಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News