ಕನ್ನಡ ಚಿತ್ರನಟ ಸುಶಿಲ್‌ ಕುಮಾರ್‌ ಆತ್ಮಹತ್ಯೆ

Update: 2020-07-08 11:55 GMT

ಮಂಡ್ಯ, ಜು.8: ಕನ್ನಡ ಸಿನಿಮಾ ಸಹನಟ ಸುಶಿಲ್‌ ಕುಮಾರ್‌ (30) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮದ ಸ್ನೇಹಿತನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇವರು ಮಂಡ್ಯದ ವಿವಿ ನಗರ ಬಡಾವಣೆ ನಿವಾಸಿಯಾಗಿದ್ದು, ಬೆಂಗಳೂರಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ʻಸಲಗʼ, ʻಕಮರೊಟ್ಟು ಚೆಕ್ ಪೋಸ್ಟ್ʼ ಸಿನಿಮಾಗಳಲ್ಲಿ ನಟಸಿದ್ದರು.

ಕಳೆದ‌ ಮೂರು ತಿಂಗಳಿಂದ ಲಾಕ್‌ಡೌನ್‌ನಿಂದಾಗಿ ಜಿಮ್ ತೆರೆದಿರಲಿಲ್ಲ. ಹೀಗಾಗಿ ಮೂರು ತಿಂಗಳಿಂದ ಮಂಡ್ಯದ ವಿವಿ ನಗರದ ತಮ್ಮದೇ ಮನೆಯಲ್ಲಿ ನೆಲೆಸಿದ್ದರು. ಸಮೀಪದ ಇಂಡುವಾಳು ಗ್ರಾಮದಲ್ಲಿರುವ ತನ್ನ ಸ್ನೇಹಿತನ ಮನೆಗೆ ತೆರಳಿದ್ದು, ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದುತಿಳಿದುಬಂದಿದೆ.

ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News