ಚುನಾವಣಾ ನಿರ್ವಹಣಾ ನಿಯಮ ತಿದ್ದುಪಡಿ ವಾಪಸ್ ಪಡೆಯಲು ವೆಲ್ಫೇರ್ ಪಾರ್ಟಿ ಆಗ್ರಹ

Update: 2020-07-08 12:47 GMT

ಬೆಂಗಳೂರು, ಜು.8: ಚುನಾವಣಾ ನಿರ್ವಹಣಾ ನಿಯಮ 1961 ತಿದ್ದುಪಡಿಯನ್ನು ಹಿಂತೆಗೆದುಕೊಳ್ಳುವಂತೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಡಾ. ಎಸ್.ಕ್ಯೂ.ಆರ್.ಇಲ್ಯಾಸ್ ಆಗ್ರಹಿಸಿದ್ದಾರೆ.

ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ಅವರಿಗೆ ಪತ್ರ ಬರೆದು,  ಚುನಾವಣೆ ನಿರ್ವಹಣೆ ನಿಯಮ 1961 ತಿದ್ದುಪಡಿ ಕುರಿತು ಕಾನೂನು ಮತ್ತು ನ್ಯಾಯ ಮಂಡಳಿಯು ಭಾರತೀಯ ಚುನಾವಣಾ ಆಯೋಗದ ಸಲಹೆಯೊಂದಿಗೆ ತಿದ್ದುಪಡಿಯನ್ನು ಯಾವುದೇ ರಾಜಕೀಯ ಪಕ್ಷಗಳ ಮಧ್ಯಸ್ಥಿಕೆ ಇಲ್ಲದೆ ಜಾರಿಯಲ್ಲಿ ತಂದಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಚುನಾವಣಾ ಆಯೋಗದ ವಕ್ತಾರ ಶೇಫಾಲ ಶರಣ್ ರವರು ಕೇಂದ್ರೀಯ ಕಾನೂನು ಮತ್ತು ನ್ಯಾಯ ಮಂಡಳಿಯ ಗೆಜೆಟ್ ನಲ್ಲಿ ಹೊರಡಿಸಿದ ಅಧಿಸೂಚನೆಯನ್ನು ಇತ್ತೀಚೆಗೆ ಟ್ವೀಟ್ ಮಾಡಿದ್ದರು ಎಂದು ಅವರು ಹೇಳಿದ್ದಾರೆ.

ಈ ತಿದ್ದುಪಡಿಯಲ್ಲಿ ಜನರ ಪ್ರಾತಿನಿದ್ಯ ಕಾಯಿದೆ 1951ರಲ್ಲಿ ಬದಲಾವಣೆ ಉಂಟಾಗುತ್ತದೆ. ಈ ತಿದ್ದುಪಡಿ 65 ವರ್ಷ ಮೇಲ್ಪಟ್ಟ ಮತದಾರರ ಮಾಹಿತಿಯನ್ನು ಪೋಸ್ಟಲ್ ಬ್ಯಾಲೆಟ್ ಮೂಲಕ ಅತಿಹೆಚ್ಚು ಪ್ರಮಾಣದಲ್ಲಿ ಸಂಘಟಿತ ಆಡಳಿತ ಮತದಾರರ ಮುಂದೆ ತೆರೆದಿಡುತ್ತದೆ ಮತ್ತು ಬ್ಯಾಲೆಟಿನ ಅಸುರಕ್ಷತೆಯಿಂದ ಮತ ಚಲಾವಣೆಯ ಪ್ರಕ್ರಿಯೆಯ ಭದ್ರತೆಗೆ ಧಕ್ಕೆ ತರುತ್ತದೆ ಎಂದು ಇಲ್ಯಾಸ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಯಾವಾಗಲೂ ಚುನಾವಣಾ ಆಯೋಗವು ಏಕಪಕ್ಷೀಯವಾಗಿ ಅಧಿಕಾರ ಚಲಾವಣೆ ಮಾಡುತ್ತಿರಲಿಲ್ಲ ಮತ್ತು ಸಾರ್ವಜನಿಕ ನೀತಿಯ ಕುರಿತು ಯಾವುದೇ ಬದಲಾವಣೆ ಮಾಡುವ ಮುಂಚೆ ಸಮಾಲೋಚನೆ ಪತ್ರವನ್ನು ಜನರ ಮುಂದೆ ಇಡುತಿತ್ತು. ಆದುದರಿಂದ, ಅದರ ಮೇಲೆ ಭರವಸೆ ಉಂಟಾಯಿತು. ಅದರ ಪರಿಣಾಮವಾಗಿ ರಾಜಕೀಯ ಪಕ್ಷಗಳಲ್ಲಿ ಮಧ್ಯಸ್ಥಿಕೆ ವಹಿಸಲು ಆರೋಗ್ಯಕರ ವಾದ ಪೂರ್ವನಿರ್ದೇಶನ ಸ್ಥಾಪಿತವಾಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಚುನಾವಣಾ ಆಯೋಗದ ಅಧಿಕಾರಿಗಳೊಂದಿಗೆ ಸಂವಿಧಾನದ ವಿಧಿ 324ರಲ್ಲಿ ವಿಧಿಸಲಾದ ಅಧಿಕಾರ ಉಪಯೋಗಿಸಿ ಮತ್ತು ತಕ್ಷಣ ಈ ತಿದ್ದುಪಡಿ ಯನ್ನು ಹಿಂತೆಗೆದುಕೊಳ್ಳಬೇಕು. ಭವಿಷ್ಯದಲ್ಲಿ ಎಲ್ಲ ಮುಖ್ಯ ರಾಜಕೀಯ ಪಕ್ಷಗಳ ರಾಷ್ಟ್ರೀಯ ನಾಯಕರೊಡನೆ ಸಮಾಲೋಚನೆ ನಡೆಸಿ ಸ್ವಾತಂತ್ರ ಮತ್ತು ನ್ಯಾಯಬಧ್ಧವಾದ ಚುನಾವಣಾ ನಿರ್ವಹಣೆ ನಡೆಯುವುದನ್ನು ಭದ್ರಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News