ಗರ್ಭಿಣಿ ಸಾವು ಪ್ರಕರಣ: ವೈದ್ಯರಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ ಕೋರ್ಟ್

Update: 2020-07-08 13:06 GMT

ಹುಬ್ಬಳ್ಳಿ, ಜು.8: ಗರ್ಭಿಣಿಯೊಬ್ಬರ ಸಾವಿಗೆ ಕಾರಣವಾಗಿದ್ದ ವೈದ್ಯರಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಹುಬ್ಬಳ್ಳಿಯ ಜೆಎಂಎಫ್‍ಸಿ ಎರಡನೆ ಕೋರ್ಟ್ ಆದೇಶಿಸಿದೆ.

ವೈದ್ಯರಿಗೆ ಶಿಕ್ಷೆ ವಿಧಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಾಧೀಶ ವಿಶ್ವನಾಥ ಮೂಗುತಿ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು.

2008ರಲ್ಲಿ ಶ್ರೀಲಕ್ಷ್ಮೀ ಕುಲಕರ್ಣಿ ಎಂಬವರನ್ನು ಅವರ ಪತಿ ಶ್ರೀನಾಥ ಕುಲಕರ್ಣಿ ದೇಶಪಾಂಡೆ ಹುಬ್ಬಳ್ಳಿ ನಗರದ ಡಾ.ಸವಿತಾ ಕಲ್ಯಾಣಪುರಕರ ಅವರ ನರ್ಸಿಂಗ್ ಹೋಮ್‍ನಲ್ಲಿ ಹೇರಿಗೆಗಾಗಿ ದಾಖಲು ಮಾಡಿದ್ದರು. ಆಗ ವೈದ್ಯರಾದ ಸವಿತಾ ಕಲ್ಯಾಣಪುರ, ಇಂಜೆಕ್ಷನ್ ನೀಡಿ ಮೂರು ನಾಲ್ಕು ಗಂಟೆಗಳಲ್ಲಿ ಹೆರಿಗೆ ಆಗುತ್ತದೆ ಎಂದು ಹೇಳಿ ಹೋಗಿದ್ದರು. ನಂತರ ತೀವ್ರ ರಕ್ತಸ್ರಾವದಿಂದ ಮಹಿಳೆ ಮೃತಪಟ್ಟಿದ್ದರು.

ಈ ಹಿನ್ನೆಲೆ ಮೃತ ಮಹಿಳೆಯ ಪತಿ ಶ್ರೀನಾಥ ಕುಲಕರ್ಣಿ, 2009ರ ಜ.2ರಂದು ಕೋರ್ಟ್ ಮೊರೆ ಹೋಗಿದ್ದರು. ಜೆಎಂಎಫ್‍ಸಿ ಎರಡನೆ ಕೋರ್ಟ್ ನಲ್ಲಿ 11 ವರ್ಷಗಳ ಕಾಲ ಪ್ರಕರಣದ ಸುದೀರ್ಘ ವಿಚಾರಣೆ ನಡೆದು, ಆರೋಪಿ ವೈದ್ಯರಿಗೆ ನ್ಯಾಯಪೀಠವು ಒಂದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News