×
Ad

ಕೊರೋನ ಹೆಸರಲ್ಲಿ ರಾಜ್ಯ ಸರಕಾರದಿಂದ ಹಗರಣ: ತನಿಖೆಗೆ ಆಗ್ರಹಿಸಿ ಎಸ್ಡಿಪಿಐ ಧರಣಿ

Update: 2020-07-09 15:22 IST

ಕಲಬುರಗಿ, ಜು.9: ಕೊರೋನ ನಿಯಂತ್ರಣ ಹೆಸರಿನಲ್ಲಿ ರಾಜ್ಯ ಸರಕಾರ ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಿದೆ. ಈ ಬಗ್ಗೆ ವಿಶೇಷ ತ೦ಡ ರಚಿಸಿ ತನಿಖೆಗೆ ನಡೆಸಬೇಕು ಎಂದು ಆಗ್ರಹಿಸಿ ಎಸ್ಡಿಪಿಐ ಪಕ್ಷದ ಕಲಬುರಗಿ ಜಿಲ್ಲಾ ಘಟಕ ಸಮಿತಿಯ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿತು.

ರಾಜ್ಯ ಸರಕಾರದ ಆರೋಗ್ಯ, ಕಂದಾಯ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

ಧರಣಿಯಲ್ಲಿ ಜಿಲ್ಲಾಧ್ಯಕ್ಷ ಸೈಯದ್ ದಸ್ತಗೀರ್, ಅಬ್ದುಲ್ ರಹೀಮ್ ಪಟೇಲ್, ಮುಹಮ್ಮದ್ ಮೊಹ್ಸಿನ್, ಸೈಯದ್ ಅಲೀಮ್ ಇಲಾಹಿ, ಡಾ.ರಿಝ್ವಾನ್ ಅಷ್ಮದ್, ಸೈಯದ್ ಝಾಕೀರ್, ಫಹೀಮ್ ಅಹ್ಮದ್, ಶಕೀಲ್ ಪಾಶಾ, ಮಿನಾಝುದ್ದೀನ್ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News