ಕೊನೆಯುಸಿರೆಳೆಯುವುದಕ್ಕೂ ಮೊದಲು ಅನಾರೋಗ್ಯಪೀಡಿತ ಯುವಕ ಹಾಡಿದ್ದ ಹಾಡು ವೈರಲ್

Update: 2020-07-10 12:19 GMT

ಬೆಂಗಳೂರು : ಕಳೆದ ವರ್ಷ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಕಕೊಪೊತ್ತರ್ ಗ್ರಾಮದ 17 ವರ್ಷದ ರಿಷಬ್ ದತ್ತಾ  ತನ್ನ ಸಂಗೀತ ಪ್ರತಿಭೆಯಿಂದ ಇಂಟರ್ನೆಟ್ ಸೆನ್ಸೇಶನ್ ಆಗಿದ್ದ. ಎರಡು ವರ್ಷಗಳ ಹಿಂದೆ ಅತ್ಯಂತ ಅಪರೂಪದ ಆರೋಗ್ಯ ಸಮಸ್ಯೆಯಾದ ಅಪ್ಲಾಸ್ಟಿಕ್ ಅನೀಮಿಯಾಗೆ ಈತ ತುತ್ತಾಗಿದ್ದ. ಇಂತಹ ಸಮಸ್ಯೆಯಿರುವವರ ದೇಹವು ಸಾಕಷ್ಟು ರಕ್ತದ ಕಣಗಳನ್ನು ಉತ್ಪಾದಿಸುವುದಿಲ್ಲ. ದೇಶದ ವಿವಿಧೆಡೆಗಳಿಂದ ಹಲವರು ಆತನ ಚಿಕಿತ್ಸೆಗೆ ದೇಣಿಗೆ ನೀಡಿದ್ದರು. ಆದರೆ ಈ ಪ್ರತಿಭಾನ್ವಿತ ಗಾಯಕ ಗುರುವಾರ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟ ನಂತರ ಆತನ ಹಾಡುಗಳ ಹಲವು ವೀಡಿಯೋಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮೊದಲು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಹಾಗೂ ನಂತರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ತನ್ನ ಸಂಗೀತ ಪ್ರತಿಭೆಯಿಂದಲೇ ಆತ ಹಲವು ಫಾಲೋವರ್ಸ್ ಅನ್ನು ಹೊಂದಿದ್ದ. ಆತನ ಸ್ನೇಹಿತರು ಹಾಗೂ ಕುಟುಂಬ ವರ್ಗ ಆತ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್‍ ಗಳ ಸಮ್ಮುಖದಲ್ಲಿಯೇ ಹಾಡುತ್ತಿರುವ ವೀಡಿಯೋಗಳನ್ನು ಶೇರ್ ಮಾಡುತ್ತಿತ್ತು. ರಿಷಬ್ ಮುಂದೊಂದು ದಿನ ವೃತ್ತಿಪರ ಗಾಯಕನಾಗಬೇಕೆಂಬ ಕನಸು ಕಂಡಿದ್ದ. ಆತನಿಗಾಗಿ ಆತನ ಕುಟುಂಬ, ಸ್ಥಳೀಯ ಎನ್‍ಜಿಒಗಳು ಹಾಗೂ ಮಾಧ್ಯಮಗಳೂ ಹಣ ಸಂಗ್ರಹ ಮಾಡಿವೆಯಲ್ಲದೆ ಕಳೆದ ವರ್ಷ ರಾಜ್ಯ ಸರಕಾರ ಕೂಡ ಬೋನ್ ಮ್ಯಾರೋ ಟ್ರಾನ್ಸ್‍ ಪ್ಲಾಂಟ್‍ ಗಾಗಿ ರೂ 50,000 ಧನಸಹಾಯ ಒದಗಿಸಿತ್ತು.

ಆದರೆ ಆತ ಗುರುವಾರ ಮೃತಪಟ್ಟಿದ್ದಾನೆಂದು ತಿಳಿದ ನಂತರ ಆತನ ಕೊನೆಯ ವೀಡಿಯೋಗಳಲ್ಲೊಂದು ಸಾಮಾಜಿಕ ಜಾಲತಾಣಗಳಲ್ಲಿ  ಬಹಳಷ್ಟು ಶೇರ್ ಆಗುತ್ತಿದೆ. ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ‘ಅಚ್ಛಾ ಚಲ್ತಾ ಹೂಂ’ ಹಾಡನ್ನು ಈ ವೀಡಿಯೋದಲ್ಲಿ ಆತ ಹಾಡಿದ್ದು ಈ ವೀಡಿಯೋವನ್ನು ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ 10,000ಕ್ಕೂ ಅಧಿಕ ಮಂದಿ 16 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಶೇರ್ ಮಾಡಿದ್ದಾರೆ.

ಯೇ ಜವಾನಿ ಹೈ ದೀವಾನಿ ಚಿತ್ರದ ಕಬೀರಾ ಹಾಡನ್ನು ಆತ ಹಾಡುತ್ತಿರುವ ವೀಡಿಯೋವನ್ನೂ ನೆಟ್ಟಿಗರು ಶೇರ್ ಮಾಡುತ್ತಿದ್ದಾರೆ. ಹಲವರು ಆತನ ಗುಣಗಾನ ಮಾಡಿ, ಆತನ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ..

rishav dutta

এই যে গীত গাই থকা ল'ৰাজন !তেওঁ আজি গীতটোত গাই থকাৰ দৰে সঁচাকৈয়ে আমাৰ মাজৰ পৰা গুচি গ'ল। তেওঁ ঋষভ দত্ত । ঘৰ তিনিচুকীয়াৰ কাকপথাৰত। দুৰাৰোগ্য ৰোগত আক্ৰান্ত হৈ বেংলুৰত মৃত্যু হয় ঋষভৰ। এটা সুন্দৰ কণ্ঠৰ অধিকাৰী ঋষভলৈ অযুত অশ্রুঞ্জলী..!

Posted by Monjit Gogoi on Thursday, 9 July 2020

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News