ಕೋವಿಡ್-19 ನಿಯಂತ್ರಿಸಬಹುದು, ಧಾರಾವಿ ಇದಕ್ಕೆ ನಿದರ್ಶನ ಎಂದ ವಿಶ್ವ ಆರೋಗ್ಯ ಸಂಸ್ಥೆ

Update: 2020-07-11 09:27 GMT

ಜಿನೇವಾ, ಜು.11: ಕಳೆದ ಆರು ವಾರಗಳಿಂದ ಕೊರೋನ ವೈರಸ್ ಸಂಖ್ಯೆ ದ್ವಿಗುಣಗೊಳ್ಳುತ್ತಿರುವ ಹೊರತಾಗಿಯೂ ಕೊರೋನ ವೈರಸ್‌ನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿದೆ ಎಂದು ವಿಶ್ವ ಆರೋಗ್ಯ ಸಂಘಟನೆ ಶುಕ್ರವಾರ ತಿಳಿಸಿದೆ.

ಆಕ್ರಮಣಕಾರಿ ಕ್ರಮಗಳ ಮೂಲಕ ವೈರಸ್‌ನ್ನು ನಿಯಂತ್ರಿಸಬಹುದು ಎನ್ನುವುದಕ್ಕೆ ಇಟಲಿ, ಸ್ಪೇನ್,ದಕ್ಷಿಣ ಕೊರಿಯಾ ಹಾಗೂ ಭಾರತದ ಅತ್ಯಂತ ದೊಡ್ಡ ಕೊಳಗೇರಿ ಮುಂಬೈನ ಧಾರಾವಿ ಪ್ರದೇಶ ಉತ್ತಮ ನಿದರ್ಶನ. ಕಳೆದ ಆರು ವಾರಗಳಿಂದ ಪ್ರಕರಣಗಳು ದ್ವಿಗುಣಗೊಂಡಿವೆ ಎಂದು ಜಿನೇವಾದಲ್ಲಿ ನಡೆದ ವರ್ಚುಯಲ್ ಪತ್ರಿಕಾಗೋಷ್ಠಿಯಲ್ಲಿ ಡಬ್ಲು ಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ೆಬ್ರಯೆಸಸ್ ಹೇಳಿದ್ದಾರೆ.

 ಕೊರೋನ ವೈರಸ್‌ನ ತೀವ್ರತೆ ಹೆಚ್ಚಾಗಿದ್ದರೂ, ಇದನ್ನು ನಿಯಂತ್ರಿಸಬಹುದು ಎಂದು ತೋರಿಸಲು ವಿಶ್ವದೆಲ್ಲೆಡೆ ಹಲವು ಉದಾಹರಣೆ ಸಿಗುತ್ತದೆ. ಇಟಲಿ, ಸ್ಪೇನ್ ಹಾಗೂ ದಕ್ಷಿಣ ಕೊರಿಯಾ, ಮುಂಬೈನ ಜನನಿಬಿಡ ಧಾರಾವಿ ಪ್ರದೇಶ ಇದಕ್ಕೆ ಕೆಲವು ಉದಾಹರಣೆಯಾಗಿದೆ. ಇಲ್ಲಿ ಸಮುದಾಯದತ್ತ ಹೆಚ್ಚಿನ ಗಮನ, ಅನಾರೋಗ್ಯದಿಂದ ಬಳಲುತ್ತಿರುವ ಎಲ್ಲರನ್ನು ಪರೀಕ್ಷಿಸುವುದು,ಪ್ರತ್ಯೇಕಿಸುವುದು ಹಾಗೂ ಚಿಕಿತ್ಸೆ ನೀಡುವುದು ಪ್ರಸರಣದ ಸರಪಳಿಯನ್ನು ತುಂಡರಿಸುವುದು ಹಾಗೂ ವೈರಸ್‌ನ್ನು ನಿಗ್ರಹಿಸುವುದು ಪ್ರಮುಖವಾಗಿದೆ ಎಂದು ಟೆಡ್ರೊಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News