ಜೈಲಿನಲ್ಲಿರುವ ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೊಗೊಯಿಗೆ ಕೊರೋನ ಸೋಂಕು

Update: 2020-07-11 18:00 GMT

ಹೊಸದಿಲ್ಲಿ: ಅಸ್ಸಾಂನ ಹೋರಾಟಗಾರ, ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೊಗೊಯಿ ಸದ್ಯ ಗುವಾಹಟಿಯ ಸೆಂಟ್ರಲ್ ಜೈಲಿನಲ್ಲಿದ್ದು, ಅವರಿಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.

ಇದಕ್ಕಿಂತಲೂ 2 ಬಾರಿ ಅವರನ್ನು ತಪಾಸಣೆ ನಡೆಸಿದಾಗ ನೆಗೆಟಿವ್ ಫಲಿತಾಂಶ ಬಂದಿತ್ತು. ಆದರೆ ಶನಿವಾರ ಮತ್ತೊಮ್ಮೆ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದೆ. ಗುವಾಹಟಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುವುದು ಎಂದು ವರದಿಯಾಗಿದೆ.

ಜೈಲಿನಲ್ಲಿರುವ ಅಖಿಲ್ ಗೊಗೊಯಿ ಅನಾರೋಗ್ಯದಿಂದಿದ್ದಾರೆ ಎಂದು ಈ ಹಿಂದೆಯೇ ಹಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಅವರಿಗೆ ಕೊರೋನ ಲಕ್ಷಣಗಳಿವೆ ಎಂದು ಆ ವರದಿಗಳು ತಿಳಿಸಿದ್ದವು. ಈ  ಬಗ್ಗೆ ಫೇಸ್ ಬುಕ್ ಪೋಸ್ಟ್ ನಲ್ಲಿ ಅವರ ಪತ್ನಿ ಆತಂಕ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News