61 ಎಪಿಪಿಗಳ ಅಮಾನತು ಪ್ರಕರಣ: ಆದೇಶ ಎತ್ತಿಹಿಡಿದ ಕೆಎಟಿ

Update: 2020-07-11 18:11 GMT

ಬೆಂಗಳೂರು, ಜು.11: ಅಕ್ರಮ ಆರೋಪದಡಿ 61 ಸಹಾಯಕ ಸರಕಾರಿ ಅಭಿಯೋಜಕರನ್ನು (ಎಪಿಪಿ) ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಅಭಿಯೋಜನಾ ಇಲಾಖೆ ಹೊರಡಿಸಿದ್ದ ಆದೇಶಿಸಿದ್ದ ಪ್ರಕ್ರಿಯೆ ಅನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಎತ್ತಿಹಿಡಿದಿದೆ ಎಂದು ವರದಿಯಾಗಿದೆ.

ಲಿಖಿತ ಪರೀಕ್ಷೆಯಲ್ಲಿ ನಕಲು ಹಾಗೂ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅಕ್ರಮ ಎಸಗಿ ನೇಮಕಗೊಂಡ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಎಪಿಪಿಗಳನ್ನು ಸರಕಾರ ಇತ್ತೀಚೆಗೆ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿತ್ತು.

ಈ ಆದೇಶ ಪ್ರಶ್ನಿಸಿ ಅಮಾನತಾದ ಎಪಿಪಿಗಳ ನಿಯೋಗ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಕೆಎಟಿ ಇದೀಗ ಸರಕಾರದ ಕ್ರಮವನ್ನು ಎತ್ತಿಹಿಡಿದಿದ್ದು, ಅರ್ಜಿದಾರರ ಮನವಿ ವಜಾಗೊಳಿಸಿ ಆದೇಶಿಸಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News